PHOTOS| ಬೆಂಗಳೂರಿನಲ್ಲಿ ನಡೆದ ನಿಖಿಲ್​ ಕುಮಾರಸ್ವಾಮಿ ರೇವತಿ ನಿಶ್ಚಿತಾರ್ಥದ ಫೋಟೋಗಳ ಝಲಕ್​ ಇದು...

N 1
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಪುತ್ರ ನಟ ನಿಖಿಲ್​ ರೇವತಿ ಅವರ ನಿಶ್ಚಿತಾರ್ಥ ಇಂದು ಅದ್ಧೂರಿಯಾಗಿ ನೆರವೇರಿತು. ಎರಡೂ ಕುಟುಂಬಗಳ ಬಂಧು-ಬಳಗ ಹಾಗೂ ಹಿರಿಯರ ಸಮ್ಮುಖದಲ್ಲಿ ಜೋಡಿ ವಜ್ರದುಂಗರ ಬದಲಾಯಿಸಿಕೊಂಡಿತು, ಕೇಕ್​ ಕಟ್​ ಮಾಡಿ ಸಂಭ್ರಮಿಸಿತು.

ಮಾಜಿ ಸಚಿವ ಎಂ. ಕೃಷ್ಣಪ್ಪ ಅವರ ಸಹೋದರನ ಮೊಮ್ಮಗಳಾದ ರೇವತಿ ಅವರೊಂದಿಗೆ ನಿಖಿಲ್‍ಕುಮಾರಸ್ವಾಮಿ ವಿವಾಹದ ನಿಶ್ಚಿತಾರ್ಥವು ಎರಡೂ ಕುಟುಂಬಗಳ ಬಂಧು-ಬಳಗ ಹಾಗೂ ಹಿರಿಯರ ಸಮ್ಮುಖದಲ್ಲಿ ನೆರವೇರಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಚಿವ ಎಚ್.ಡಿ. ರೇವಣ್ಣ ಸೇರಿ ಕುಟುಂಬದ ಸದಸ್ಯರು ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದರು.

ವಿವಿಧ ಪಕ್ಷಗಳ ರಾಜಕೀಯ ನಾಯಕರು, ಮುಖಂಡರು, ಚಲನಚಿತ್ರರಂಗದ ಗಣ್ಯರು, ಉಭಯ ಕುಟುಂಬಗಳ ಬಂಧುಗಳು, ಹಿತೈಷಿಗಳು ನಿಶ್ಚಿತಾರ್ಥಕ್ಕೆ ಆಗಮಿಸಿ ನಿಖಿಲ್ ಹಾಗೂ ರೇವತಿ ಅವರಿಗೆ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net