ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಮತ್ತು ರೇವತಿ ನಿಶ್ಚಿತಾರ್ಥ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಆರಂಭವಾಗಿದೆ.
ನಿಶ್ಚಿತಾರ್ಥಕ್ಕೆ ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಸಹೋದರಿ ಶೈಲಜಾ ಮತ್ತು ಅನುಸೂಯ ಮತ್ತು ಕುಮಾರಸ್ವಾಮಿ ಅವರ ತಾಯಿ ಚೆನ್ನಮ್ಮ ಅವರ ಮಾರ್ಗದರ್ಶನದಲ್ಲಿ ಎಲ್ಲ ತಯಾರಿಗಳು ನಡೆದಿವೆ.
ನಿಶ್ಚಿತಾರ್ಥ ಸಂಪೂರ್ಣ ವೈಟ್ ಥೀಮ್‌ನಲ್ಲಿ ನಡೆಯಲಿದೆ. ಕಾರ್ಪೇಟ್ನಿಂದ ಹುಡುಗ ಹುಡುಗಿ ಉಂಗುರ ಬದಲಾಯಿಸುವ ಮಂಟಪ ಕೂಡಾ ಶ್ವೇತ ವರ್ಣದಲ್ಲಿರುತ್ತದೆ.
ನಿಶ್ಚಿತಾರ್ಥದ ಮಂಟಪ ಮತ್ತು ನಡೆಯುವ ಜಾಗವನ್ನು ಹೂವಿನಿಂದ ಅಲಂಕರಿಸಲಾಗಿದ್ದು, ಅದಕ್ಕಾಗಿ ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಬೆಳೆಯುವ ಬಿಳಿಯ ಬಣ್ಣದ ತರಿಸಲಾಗಿದೆ. ದೆಹಲಿಯಿಂದ ಕ್ರಿಸ್ಟಲ್ಸ್‌ಗಳನ್ನು ತರಿಸಿ ಅಲಂಕಾರಕ್ಕೆ ಬಳಸಿಕೊಳ್ಳಲಾಗುತ್ತದೆ.
ನಿಖಿಲ್ ಮತ್ತು ರೇವತಿ ಇಬ್ಬರ ಕುಟುಂಬವನ್ನು ಬರಮಾಡಿಕೊಳ್ಳಲು ಕರ್ನಾಟಕದ ವಿಶೇಷವಾದ ನಾದಸ್ವರವನ್ನು ಗೇಟಿನ ಬಳಿಯೇ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಕೇರಳದ ಚಂಡೆ ಸಹ ಇರಲಿದೆ. ಹೂವುಗಳಿಂದ ಮಾಡಿದ ಛತ್ರಿಯನ್ನು ಹುಡುಗ ಹುಡುಗಿಗೆ ಹಿಡಿಯಲಾಗುತ್ತದೆ.
7.30 ರಿಂದ 9 ಗಂಟೆಯವರೆಗೆ ರಾಹುಕಾಲ ವಿರುವ ಹಿನ್ನೆಲೆಯಲ್ಲಿ 7.30 ರೊಳಗೆ ಹೋಟೇಲ್ಗೆ ಎರಡು ಕುಟುಂಬದ ಸದಸ್ಯರು ಆಗಮಿಸಿದ್ದಾರೆ. 10.30 ಕ್ಕೆ ನಡೆಯಲಿರುವ ನಿಶ್ಚಿತಾರ್ಥದಲ್ಲಿ ರೇವತಿಗೆ ವಜ್ರದ ಉಂಗುರ ತೊಡಿಸಿ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.
ಎಲ್ಲರಿಗೂ ಒಂದೇ ಊಟ: ಈ ನಿಶ್ಚಿತಾರ್ಥದಲ್ಲಿ ವಿಐಪಿ ಮತ್ತು ಸಾಮಾನ್ಯ ಜನ ಎಲ್ಲರಿಗೂ ಒಂದೇ ರೀತಿಯ ಅಡುಗೆಯನ್ನು ಮಾಡಿಸಲಾಗುತ್ತಿದೆ. ಸುಮಾರು 35 ರೀತಿಯ ಕರ್ನಾಟಕ ಶೈಲಿಯ ಖಾದ್ಯಗಳನ್ನು ಬಂದ ಅತಿಥಿಗಳು ಸವಿಯಲಿದ್ದಾರೆ. ಬಾಳೆ ಎಲೆ ಮತ್ತು ಬಫೆ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ನಿಶ್ಚಿತಾರ್ಥಕ್ಕೆ ಬಂದ ಎಲ್ಲರೂ ಊಟ ಮಾಡಿ ಹೋಗಬೇಕು ಎನ್ನುವ ಉದ್ದೇಶದಿಂದ ಈ ರೀತಿ ವ್ಯವಸ್ಥೆ ಮಾಡಲಾಗಿದೆ.
ಪಕ್ಷ ಭೇದ ಮರೆತು ಆಹ್ವಾನ: ಕುಮಾರಸ್ವಾಮಿ ಪಕ್ಷ ಭೇದ ಮರೆತು, ಎಲ್ಲರನ್ನು ತಮ್ಮ ಪುತ್ರನ ನಿಶ್ಚಿತಾರ್ಥಕ್ಕೆ ಆಹ್ವಾನಿಸಿದ್ದಾರೆ. ಚಿತ್ರರಂಗದ ಗೆಳೆಯರಿಗೆ ನಿಖಿಲ್ ಕುಮಾರ್ ಆಹ್ವಾನ ನೀಡಿದ್ದಾರೆ.
ಯಾವುದೇ ಪಾಸ್ ಇಲ್ಲ: ನಿಶ್ಚಿತಾರ್ಥಕ್ಕೆ ಬರುವವರಿಗೆ ಯಾವುದೇ ಪಾಸ್ ವ್ಯವಸ್ಥೆಯನ್ನು ಮಾಡಿಲ್ಲ. ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಎಲ್ಲರಿಗೂ ಮುಕ್ತ ಆಹ್ವಾನವನ್ನು ನೀಡಲಾಗಿದೆ.