

ರಾಮನಗರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹೆಸರನ್ನು ಶಾಸಕಿ ಅನಿತಾ ಕುಮಾರಸ್ವಾಮಿ ಘೋಷಿಸಿದರು.
ರಾಮನಗರದಲ್ಲಿ ಶನಿವಾರ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿದ ಅನಿತಾ, ನಮ್ಮ ಮಾವನವರಿಗೆ, ನನ್ನ ಪತಿ ಅವರಿಗೆ, ನನಗೆ ಕೊಟ್ಟ ಬೆಂಬಲವನ್ನು ನೀವುಗಳು ನನ್ನ ಮಗನಿಗೂ ಕೊಡಬೇಕು ಎಂದರು ಮನವಿ ಮಾಡಿದರು. ದೇವೇಗೌಡರ ಕುಟುಂಬ ಸದಾ ನಿಮ್ಮ ಸೇವೆ ಮಾಡಲು ಸಿದ್ದವಿದೆ. ಕೆಲವರು ಅಪಪ್ರಚಾರ ಮಾಡುತಿದ್ದರು. ಅದೆಲ್ಲಕ್ಕೂ ತೆರೆ ಎಳೆಯಬೇಕು ಎಂದು ನಿರ್ಧರಿಸಿರುವೆ ಎನ್ನುತ್ತಲೇ ರಾಮನಗರಕ್ಕೆ ನಿಖಿಲ್ ಅಭ್ಯರ್ಥಿ ಎಂದರು. ನಿಖಿಲ್ ಹೆಸರು ಘೋಷಣೆ ಆಗುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘೋರ ಮೊಳಗಿಸಿದರು.
ಬಳಿಕ ಮಾತನಾಡಿದ ನಿಖಿಲ್, ಅನಿತಾ ಕುಮಾರಸ್ವಾಮಿ ಅವರು ಇದ್ದಕ್ಕಿದ್ದಂಗೆ ಘೋಷಣೆ ಮಾಡಿದ್ದಾರೆ. ಅವರು ಘೋಷಣೆ ಮಾಡ್ತಾರೆ ಅಂತ ನನ್ನ ಮನಸ್ಸಲ್ಲೂ ಅಂದು ಕೊಂಡಿರಲಿಲ್ಲ. ಯುವ ಘಟಕದ ರಾಜ್ಯಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಹಿಂದೆ ದೇವೇಗೌಡರ ಪರವಾಗಿ ನಿಂತ್ರಿ, ನಂತರ ಎರಡು ಬಾರಿ ಕುಮಾರಸ್ವಾಮಿ ಪರ ನಿಂತ್ರಿ. ಕುಮಾರಣ್ಣನ್ನ ರಾಜಕೀಯವಾಗಿ ಬೆಳೆಸಿದ್ದೀರಿ. ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಇವತ್ತಿಗೂ ನನ್ನ ಅಭಿಪ್ರಾಯದಲ್ಲಿ ರಾಮನಗರ ಸೂಕ್ತ ಅಭ್ಯರ್ಥಿ ಅಂದ್ರೆ ಅದು ಕುಮಾರಣ್ಣ. ನಮ್ಮ ತಂದೆ ಜನರ ಪರವಾಗಿ ಧ್ವನಿ ಎತ್ತಿ ಕೆಲಸ ಮಾಡಿದ್ದಾರೆ... ಎನ್ನುತ್ತಲೇ ಗದ್ಗದಿತರಾದರು.