ವಚನ ಚಳವಳಿ ಶಕ್ತಿ ಹಡಪದ ಅಪ್ಪಣ್ಣ

22kmr2
ಕಮಲನಗರದಲ್ಲಿ ಶರಣ ಸಾಹಿತ್ಯ ಪರಿಷತ್ ಭಾನುವಾರ ಏರ್ಪಡಿಸಿದ್ದ ಹುಣ್ಣಿಮೆ ಶರಣ ಜ್ಯೋತಿ ಹಾಗೂ ನಿಜಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವದಲ್ಲಿ ಪ್ರೊ.ಶಂಭುಲಿಂಗ ಕಾಮಣ್ಣ, ಪ್ರೊ.ಮಲ್ಲಮ್ಮ ಪಾಟೀಲ್, ಚಂದ್ರಕಾಂತ ಗಳಗೆ, ಅಶೋಕ ಎಸ್.ಹಡಪದ, ಗಣಪತಿ ಕುರನಳ್ಳೆ, ಶಾಂತಕುಮಾರ ಬಿರಾದಾರ, ರಾಜಶೇಖರ ಅಜ್ಜ ಇತರರಿದ್ದರು.
Published on

ಕಮಲನಗರ: ವಚನಗಳ ಮೂಲಕ ತಳ ಸಮುದಾಯದ ಕ್ರಾಂತಿಕಾರಕ ಬದಲಾವಣೆಗೆ ಕಾರಣರಾದ ನಿಜಶರಣ ಹಡಪದ ಅಪ್ಪಣ್ಣ ಅವರು ವಚನ ಚಳವಳಿಗೆ ಶಕ್ತಿ ತುಂಬಿದ್ದರು ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಶಂಭುಲಿಂಗ ಕಾಮಣ್ಣ ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನ ಶಾಖಾಮಠದಲ್ಲಿ ಭಾನುವಾರ ಶರಣ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಹುಣ್ಣಿಮೆ ಶರಣ ಜ್ಯೋತಿ ಹಾಗೂ ನಿಜಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರು ೧೨ನೇ ಶತಮಾನದಲ್ಲಿ ನೂರಾರು ಶರಣರನ್ನು ಒಂದೆಡೆ ಸೇರಿಸಿ ಕಾಯಕ ವೃತ್ತಿ ಪ್ರಾರಂಭಿಸಿದರು. ಯಾರು ಕಾಯಕ ಮಾಡುತ್ತಾರೋ ಅವರಿಗೆ ನಿರುದ್ಯೋಗ ಸಮಸ್ಯೆ ಕಾಡುವುದಿಲ್ಲ. ಪ್ರತಿಯೊಬ್ಬರೂ ಅವರವರ ಕಾಯಕದಲ್ಲಿ ತೊಡಗಿದರೆ ನಿರುದ್ಯೋಗವನ್ನು ತೊಲಗಿಸಬಹುದು. ಹಡಪದ ಅಪ್ಪಣ್ಣ ರಚಿಸಿದ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಸ್ಮರಿಸಿದರು.

ಸಾಹಿತಿ ಪ್ರೊ.ಮಲ್ಲಮ್ಮ ಪಾಟೀಲ್ ಮಾತನಾಡಿ, ಸಮಾಜದಲ್ಲಿ ಯಾರೂ ಶ್ರೇಷ್ಠ ಅಥವಾ ಕನಿಷ್ಠರಲ್ಲ. ನಾವೆಲ್ಲರೂ ಪರಮಾತ್ಮನ ಮಕ್ಕಳು. ಎಲ್ಲರೂ ಸಮಾನರೆಂದು ಪ್ರತಿಬಿಂಬಿಸಿದವರು ಬಸವಣ್ಣನವರು. ಎಲ್ಲರೂ ನಿಜಶರಣ ಹಡಪದ ಅಪ್ಪಣ್ಣನವರ ವಚನ ಸಾಹಿತ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಡಪದ ಸಮಾಜದ ತಾಲೂಕು ಅಧ್ಯಕ್ಷ ಅಶೋಕ ಎಸ್.ಹಡಪದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಗಣಪತಿ ಕುರನಳ್ಳೆ, ಭಾವುರಾವ ಹೇಡೆ, ರಾಜಶೇಖರ ಅಜ್ಜ, ಇಲಾಹಿ ಬಾಗವಾನ್, ಮಾಧವರಾವ ಚಾಂಗೂಣೆ, ಶಾಂತಕುಮಾರ ಬಿರಾದಾರ ಇತರರಿದ್ದರು. ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಚಂದ್ರಕಾಂತ ಗಳಗೆ ಸ್ವಾಗತಿಸಿದರು. ಪ್ರಭುರಾವ ಕಳಸೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net