

ಸಂಕೇಶ್ವರ: ಗ್ರಾಮೀಣ ಪ್ರದೇಶದ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಶ್ರಮಿಸಿದವರು ಲಿಂ. ಪಂಚಮ ನಿಜಲಿಂಗೇಶ್ವರರು ಎಂದು ನಿಡಸೋಸಿ ಜಗದ್ಗುರು ಪಂಚಮ ಡಾ.ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ನಿಡಸೋಸಿ ಪಾಲಿಟೆಕ್ನಿಕ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್‌ಜೆಪಿಎನ್ ಟ್ರಸ್ಟ್‌ನ ಸಂಸ್ಥಾಪಕರಾದ ಪಂಚಮ ನಿಜಲಿಂಗೇಶ್ವರ ಸ್ವಾಮೀಜಿಯವರ 36ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರ್. ಓಂಕಾರಪ್ಪ ಲಿಂಗೈಕ್ಯ ನಿಜಲಿಂಗೇಶ್ವರ ಶ್ರೀಗಳ ಜೀವನ ಮತ್ತು ಸಾಧನೆಯ ಕುರಿತು ಮಾತನಾಡಿದರು.
ಡಿಸಿಇಟಿ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳನ್ನು ಶ್ರೀಗಳು ಸನ್ಮಾನಿಸಿದರು.
ಟ್ರಸ್ಟ್‌ನ ಉಪಾಧ್ಯಕ್ಷ ಜಿ.ಎಂ.ಪಾಟೀಲ, ಕಾರ್ಯದರ್ಶಿ ಸುರೇಶ ಬೆಲ್ಲದ, ಸಂಗಮ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಎಂ.ಬಿ.ಕೋಥಳಿ, ಪ್ರಾಚಾರ್ಯ ಡಾ.ಎಸ್. ಸಿ.ಕಮತೆ, ಉಮೇಶ ನಾಯಕ, ಬಸವರಾಜ ಹಾಲಭಾವಿ ಇತರರಿದ್ದರು. ಪ್ರೊ.ಬಿ.ಆರ್.ಉಮರಾಣೆ ಸ್ವಾಗತಿಸಿದರು. ಜಿ.ಬಿ.ಸಂಗೋಟೆ ವಂದಿಸಿದರು. ಸುನಿತಾ ಬಾಗೇವಾಡಿ ನಿರೂಪಿಸಿದರು.