

ಮೂಡಲಗಿ: ನಿಜಗುಣದೇವ ಸ್ವಾಮೀಜಿ ಕೈಗೊಳ್ಳುತ್ತಿರುವ ಸಮಾಜಮುಖಿ ಕಾರ್ಯ ಶ್ಲಾನೀಯ ಎಂದು ಎಂದು ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.
ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ 26ನೇ ಸತ್ಸಂಗ ಮಹೋತ್ಸವ ಹಾಗೂ ಸಿದ್ಧಲಿಂಗ ಸ್ವಾಮಿಜಿ ಜಾತ್ರಾಮಹೋತ್ಸವದಲ್ಲಿ ಅವರು ಆರ್ಶೀರ್ವಚನ ನೀಡಿದರು. ಬೆಳಗಾವಿ&ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸ್ವಂತಕ್ಕಾಗಿ ಬದುಕದೆ ಎಲ್ಲರೂ ನನ್ನವರು ಎಂದು ಬದುಕುವವನೇ ನಿಜ ಸಂತ. ಅದಕ್ಕೆ ನಿಜಗುಣದೇವ ಸ್ವಾಮೀಜಿ ನಿದರ್ಶನವಾಗಿದ್ದಾರೆ ಎಂದರು.
ವಿಶೇಷ ಪೂಜೆ: ಬೆಳಗ್ಗೆ ಸಿದ್ಧಲಿಂಗ ಯತಿರಾಜರು, ಶಾಂಭವಿ ಮಾತೆ ಹಾಗೂ ಸಿದ್ಧಲಿಂಗ ಮಹಾರಾಜರ ಮೂರ್ತಿಗಳಿಗೆ ರುದ್ರಾಭಿಷೇಕ ಸೇರಿ ವಿಶೇಷ ಪೂಜೆ ಜರುಗಿತು. ಓಂಕಾರ ಧ್ವಜಾರೋಹಣ, ಸಿದ್ಧಲಿಂಗ ರಥದ ಕಳಸಾರೋಹಣ ಹಾಗೂ ಸಹಸ್ರ ಮುತೆದೆಯರಿಗೆ ಉಡಿ ತುಂಬುವ ಕಾರ್ಯ ನೆರವೇರಿತು. ನಿಜಗುಣದೇವ ಸ್ವಾಮೀಜಿ, ಬೀದರಿನ ಗಣೇಶಾನಂದ ಮಹಾರಾಜರು, ಲಿಂಗನೂರಿನ ಶಿವಪುತ್ರ ಅವಧೂತರು, ಮಹಾದೇವಾನಂದ ಸರಸ್ವತಿ ಸ್ವಾಮೀಜಿ, ಕೃಪಾನಂದ ಸ್ವಾಮೀಜಿ, ಕೊಟಬಾಗಿಯ ಪ್ರಭುದೇವ ಸ್ವಾಮಿಜಿ ಇತರರಿದ್ದರು.