ಮಲೈ ಮಹದೇಶ್ವರ ದೇವಸ್ಥಾನದಲ್ಲಿ ಸದ್ಯಕ್ಕಿಲ್ಲ ರಾತ್ರಿ ತಂಗುವ ವ್ಯವಸ್ಥೆ; ಎಷ್ಟು ದಿನ? ಇಲ್ಲಿದೆ ಮಾಹಿತಿ..

Madeshwara
Published on

ಬೆಂಗಳೂರು: ಇದು ಮಲೈ ಮಹದೇಶ್ವರ ದೇವಸ್ಥಾನದ ಭಕ್ತರ ಗಮನಕ್ಕೆ. ಏಕೆಂದರೆ ಈ ದೇವಳದಲ್ಲಿ ಸದ್ಯಕ್ಕೆ ರಾತ್ರಿಯ ವೇಳೆ ತಂಗುವ ವ್ಯವಸ್ಥೆಯನ್ನು ರದ್ದು ಪಡಿಸಲಾಗಿದೆ. ಹೀಗಾಗಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ದೇವಸ್ಥಾನಕ್ಕೆ ತೆರಳುವವರು ಸೂಕ್ತ ವ್ಯವಸ್ಥೆ ಮಾಡಿಕೊಂಡೇ ಹೊರಡುವುದು ಒಳಿತು.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಶ್ರೀ ಮಲೈ ಮಹದೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆ. 28ರಿಂದ ಮಾರ್ಚ್​ 2ರವರೆಗೆ ವಿಶೇಷ ಪೂಜೆ ಉತ್ಸವಗಳು ನಡೆಯಲಿವೆ.

ಫೆ. 28ರಂದು ಮಹಾಶಿವರಾತ್ರಿ ಪೂಜಾರಂಭ, ಮಾ. 1ರಂದು ಮಹಾಶಿವರಾತ್ರಿ, ಮಾ. 2ರಂದು ಅಮಾವಾಸ್ಯೆ ವಿಶೇಷ ಸೇವೆ ಉತ್ಸವ, ಮಾ. 3ರಂದು ರಥೋತ್ಸವ ನಡೆಯಲಿದೆ. ಆದರೆ ನಾಳೆ ರಾತ್ರಿಯಿಂದಲೇ ಅಂದರೆ ಫೆ. 27ರಿಂದ ಮಾ. 3ರವರೆಗೆ ದೇವಸ್ಥಾನದಲ್ಲಿ ರಾತ್ರಿ ತಂಗುವಿಕೆಯನ್ನು ಪೂರ್ಣವಾಗಿ ನಿಷೇಧಿಸಿರುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net