ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ

20230924_144038
Published on

ವಿಜಯವಾಣಿ ಸುದ್ದಿಜಾಲ ಗದಗ/ರೋಣ
ರಾಜ್ಯ ಕಾಂಗ್ರೆಸ್​ ಸರ್ಕಾರಕ್ಕೆ ಹೊಸ ಡಿಸಿಎಂ ಹುದ್ದೆ ಸೃಷ್ಟಿ ಪ್ರಕ್ರಿಯೆ ಕಗ್ಗಟ್ಟಾದಂತೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಆಯ್ಕೆಯೂ ಕಗ್ಗಂಟಾಗಿ ಪರಿಣಮಿಸಿದೆ. ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಗತಿಸಿದರೂ ನಿಗಮ ಮಂಡಳಿ ಆಯ್ಕೆ ನಡೆದ ಹಿನ್ನೆಲೆ ಆಕಾಂಗಳಲ್ಲಿ ತಳಮಳ ಸೃಷ್ಟಿಯಾಗಿದ್ದು, ಸ್ಥಳಯ ಶಾಸಕರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ನಿಗಮ- ಮಂಡಳಿ ಅಧ್ಯಕ್ಷಗಿರಿ ಗಿಟ್ಟಿಸಿಕೊಳ್ಳಲು ದುಂಬಾಲು ಬಿದ್ದಿದ್ದಾರೆ.
ಜಿಲ್ಲೆಯ ರೋಣ ಮತ್ತು ಗದಗ ಕ್ಷೇತ್ರದಲ್ಲಿ ಆಕಾಂಗಳ ಪಟ್ಟಿ ಅಧಿಕಗೊಳ್ಳುತ್ತಿದೆ. ರೋಣ ಕ್ಷೇತ್ರದಲ್ಲಿ ಈ ಬೆಳವಣಿಗೆ ತೀವ್ರ ಸ್ವರೂಪ ಪಡೆದಿದ್ದು, ಐದು ವರ್ಷಗಳ ರಾಜಕೀಯ ಅಜ್ಞಾತವಾಸ ಮುಗಿಸಿ ಹೊರಬಂದಿರುವ ಶಾಸಕ ಜಿ.ಎಸ್​. ಪಾಟೀಲರಿಗೆ ಈ ಬೆಳವಣಿಗೆ ಬಿಸಿ ತುಪ್ಪವಾಗಿದೆ.
ಚುನಾವಣಾ ಲಿತಾಂಶದ ನಂತರ ತಟಸ್ಥ ನಿಲುವು ತಾಳಿದ್ದ ಕ್ಷೇತ್ರದ ಪ್ರಮುಖ ಸಮುದಾಯದ ಮುಖಂಡರು ನಿಗಮ- ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಜಿ.ಎಸ್​. ಪಾಟೀಲರಿಗೆ ಮನವಿ ನೀಡುತ್ತಿದ್ದಾರೆ. ಶಾಸಕರ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಮುಖಂಡರಿಗೆ ಮನವರಿಕೆ ಮಾಡಿಕೊಡುತ್ತಿರುವ ಆಕಾಂಗಳು ನಮಗೂ ಆದ್ಯತೆ ಕೊಡಿ ಎಂದು ಮುಖಂಡರು ಮನೆಗೆ ಎಡತಾಕುತ್ತಿವೆ. ಮೂಲಗಳ ಪ್ರಕಾರ ಜಿಲ್ಲೆಗೆ ಎರಡು ನಿಗಮ ಮಂಡಳಿಗಳು ಲಭ್ಯವಾಗಬಹುದು ಎನ್ನಲಾಗಿದೆ. ರೋಣ ಮತ್ತು ಗದಗ ಮತ ಕ್ಷೇತ್ರಕ್ಕೆ ತಲಾ ಒಂದರಂತೆ ನಿಗಮ ಹಂಚಿಕೆ ಆಗಲಿದೆ ಎಂದು ಮೂಲಗಳು ವಿಜಯವಾಣಿಗೆ ತಿಳಿಸಿದೆ.
ಕೆಲ ದಿನಗಳ ಹಿಂದೆ ಮಾಜಿ ಶಾಸಕ ಕಳಕಪ್ಪ ಬಂಡಿ ಸಹೋದರ ಸಿದ್ದಣ್ಣ ಬಂಡಿ ಅವರಿಗೆ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಗಜೇಂದ್ರಗಡದ ಸಿದ್ದಣ್ಣ ಬಂಡಿ ಅಭಿಮಾನಿ ಬಳಗದವರು ಜಿ.ಎಸ್​. ಪಾಟೀಲರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಅದರಂತೆ, ಈ ಹಿಂದೆ ಕೂಡಲ ಸಂಗಮ ಅಭಿವೃದ್ಧಿ ಮಂಡಳಿ ನಿರ್ದೇಶಕರಾಗಿ ಕಳೆದ ಸೇವೆ ಸಲ್ಲಿಸಿರುವ ಹಾಗೂ ಕಳೆದ 35 ವರ್ಷದಿಂದ ಜಿಎಸ್​ ಪಾಟೀಲರ ಆಪ್ತರಾಗಿರುವ ವೀರಯ್ಯ ಸೋಮನಕಟ್ಟಿಮಠ ಮತ್ತು ದಶರಥ ಗಾಣಿಗೇರ ಆಕಾಂಗಳಲ್ಲಿ ಪ್ರಮುಖರಾಗಿದ್ದಾರೆ. ಗದಗ ನಲ್ಲಿ ಮಾಜಿ ಜಿಪಂ ಅಧ್ಯಕ್ಷ ವಾಸಣ್ಣ ಕುರಡಗಿ, ಲೆ$್ಮಶ್ವರದ ಮಾಜಿ ಶಾಸಕ ಜಿ.ಎಸ್​. ಗಡ್ಡದೇವರ ಮಠ ಹೆಸರು ಚಾಲ್ತಿಯಲ್ಲಿದೆ.

ಬಾಕ್ಸ್​:
ರೋಣ ಕ್ಷೇತ್ರದ ಶಾಸಕ ಜಿ.ಎಸ್​. ಪಾಟೀಲರು ಕಳೆದ ಚುನಾವಣೆಯಲ್ಲಿ ಗೆಲುವು ಅನಿವಾರ್ಯವಾಗಿತ್ತು. ಕೇವಲ ಕಾಂಗ್ರೆಸ್​ ಬಲದಿಂದ ಮಾತ್ರ ಗೆಲುವು ಸುಲಭವಾಗಿರಲಿಲ್ಲ. ಈ ಹಿನ್ನೆಲೆ ರಹಸ್ಯವಾಗಿ ಜಾತಿವಾರು ಸಮೀಕ್ಷೆ ನಡೆಸಿದ್ದರು ಹಾಗೂ ಕ್ಷೇತ್ರದ ಪ್ರಬಲ ಸಮುದಾಯದ ಮತಗಳನ್ನು ಸೆಳೆಯಲು ಮುಖಂಡರಿಗೆ ಹಲವು ಭರವಸೆ ನೀಡಿದ್ದರು, ಅದರಲ್ಲಿ ನಿಗಮ- ಮಂಡಳಿಯ ಅಧ್ಯಕ್ಷ ಸ್ಥಾನ ಕೊಡಿಸುವ ಭರವಸೆಯೂ ಒಂದಾಗಿತ್ತು ಎನ್ನಲಾಗಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ರೋಣ ವಿಧಾನಸಭೆ ಕ್ಷೇತ್ರದಲ್ಲಿ ನಿಗಮ- ಮಂಡಳಿಗಾಗಿ ಬಾರಿ ಪೈಪೋಟಿ ನಡೆದಿದೆ. ಈ ಬೆಳವಣಿಗೆ ನಿಭಾಯಿಸುವುದು ಶಾಸಕರಿಗೆ ನುಂಗಲಾರದ ತುತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net