ಗ್ರಾಮದೇವರ ಹಬ್ಬಗಳು ಸಂಸ್ಕೃತಿಯ ಪ್ರತೀಕ

niduvanda festival
Published on

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಜಾತ್ರೆಗಳು ಮತ್ತು ಗ್ರಾಮದೇವರ ಹಬ್ಬಗಳು ನಾಡಿನ ಸಂಸ್ಕೃತಿಯ ಪ್ರತೀಕವಾಗಿದ್ದು, ಈ ರೀತಿಯ ಆಚರಣೆಗಳಿಂದ ಎಲ್ಲ ಸಮುದಾಯಗಳನ್ನು ಒಂದುಗೂಡಿಸಲು ಸಾಧ್ಯ ಎಂದು ಗ್ರಾಪಂ ಸದಸ್ಯ ಆನಂದಕುಮಾರ್ ತಿಳಿಸಿದರು.
ಸೋಂಪುರ ಹೋಬಳಿಯ ನಿಡವಂದದಲ್ಲಿ ಹಮ್ಮಿಕೊಂಡಿದ್ದ ಶ್ರೀ ಗ್ರಾಮ ದೇವತೆ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು.
ಹಬ್ಬದ ಹೆಸರಿನಲ್ಲಿ ದೇವರನ್ನು ಆರಾಧಿಸುವುದರಿಂದ ಎಲ್ಲ ಗ್ರಾಮಗಳಲ್ಲಿ ಉತ್ತಮ ಮಳೆ ಬೆಳೆಯಾಗಿ, ಜನರು ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗಲಿದೆ. ಈ ರೀತಿಯ ಆಚರಣೆಗಳನ್ನು ಮುಂದಿನ ತಲೆಮಾರಿನ ಜನರು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಸೋಂಪುರ ಗ್ರಾಪಂ ಮಾಜಿ ಸದಸ್ಯ ಆರ್.ಪರಮೇಶ್ ಮಾತನಾಡಿ, ದೇವರ ಉತ್ಸವಗಳು ಹಾಗೂ ಜಾತ್ರೆಗಳು ಜನರಲ್ಲಿ ಶ್ರದ್ಧೆ, ಭಕ್ತಿಯ ಪ್ರತೀಕವಾಗಿವೆ ಎಂದರು.
ಮಹಿಳೆಯರು ಆರತಿ ಹೊತ್ತು ಮೆರವಣಿಗೆ ಮೂಲಕ ಸಾಗಿ ದೇವರಿಗೆ ಅರ್ಪಿಸಿದರು. ಗ್ರಾಪಂ ಸದಸ್ಯರಾದ ಇಂದ್ರಮ್ಮ ಪರಮೇಶ್, ಲಾವಣ್ಯಾ ಜಗದೀಶ್, ರಮಾದೇವಿ ಯುವರಾಜ, ಕೃಷ್ಣಪ್ಪ, ಮಾಜಿ ಸದಸ್ಯರಾದ ಬಿ.ಕುಮಾರ, ರಾಮಕೃಷ್ಣಯ್ಯ, ಎನ್.ಟಿ ಜಗದೀಶ, ಭೋಜರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net