ದೇವಸ್ಥಾನ, ಶಾಲೆ ಮನುಷ್ಯನ ಎರಡು ಕಣ್ಣುಗಳಿದ್ದಂತೆ: ಕೆ.ಮೋಹನ್ ಕುಮಾರ್ ಅನಿಸಿಕೆ

18
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ದೇವಸ್ಥಾನ ಹಾಗೂ ಶಾಲೆ, ಮನುಷ್ಯನಿಗೆ ಎರಡು ಕಣ್ಣುಗಳಿದ್ದಂತೆ ಇವೆರಡರ ಅಭಿವೃದ್ಧಿಯಲ್ಲಿ ಊರವರ ಪಾತ್ರ ಮುಖ್ಯವಾಗಿದೆ. ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಇತರ ಸಂ - ಸಂಸ್ಥೆಗಳ ಸಹಕಾರದಲ್ಲಿ ಈಗಾಗಲೇ 5 ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿ ನಡೆಸಿದ್ದು, 6ನೇ ಶಾಲೆಯ ಕೆಲಸ ಪ್ರಗತಿಯಲ್ಲಿದ್ದು, ಇದೀಗ 7ನೇ ಶಾಲೆಯ ಅಭಿವೃದ್ಧಿಗೆ ಮುಂದಾಗಿದೆ ಎಂದು ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಕೆ.ಮೋಹನ್ ಕುಮಾರ್ ಹೇಳಿದರು.

ಉಜಿರೆ ಎಸ್‌ಡಿಎಂ ಕಾಲೇಜಿನ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ನ ಸೇವಾ ಯಜ್ಞ ಕಾರ್ಯಕ್ರಮದ ಅಂಗವಾಗಿ ನಿಡ್ಲೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಾನಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಎಸ್‌ಡಿಎಂ ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ, ತಾಲೂಕು ಪತ್ರಕರ್ತರ ಸಂ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್, ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜು ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರಶಾಂತರಾಜ್, ಗ್ರಾಪಂ ಸದಸ್ಯರಾದ ಜಗದೀಶ ಶೆಟ್ಟಿ, ಮೋಹನ್ ಪೂಜಾರಿ, ಹೇಮಾವತಿ ಕಟ್ಟಡ ದುರಸ್ತಿ ಸಮಿತಿ ಅಧ್ಯಕ್ಷ ಭದ್ರಯ್ಯ ಗೌಡ, ಗೌರವಾಧ್ಯಕ್ಷ ಜಿನ್ನಪ್ಪ ಗೌಡ, ಪ್ರಮುಖರಾದ ವೀರೇಶ್ವರ ಹೆಬ್ಬಾರ್, ರಾಜಗುರು ಹೆಬ್ಬಾರ್, ಪ್ರಫುಲ್ಲಾ, ಮಾಧವಿ ಮತ್ತಿತರರಿದ್ದರು. ಮುಖ್ಯ ಶಿಕ್ಷಕಿ ಮೀನಾಕ್ಷಿ ಎಚ್. ನಿರೂಪಿಸಿದರು.

ಸಂಘ-ಸಂಸ್ಥೆಗಳ ಸಹಕಾರದಲ್ಲಿ ಅಭಿವೃದ್ಧಿ

ಒಂದರಿಂದ 7 ತರಗತಿಗಳನ್ನು ಹೊಂದಿರುವ ನಿಡ್ಲೆಯ ಈ ಶಾಲೆಗೆ 60 ವರ್ಷಗಳು ಸಂದಿದ್ದು, ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಕಟ್ಟಡ, ಛಾವಣಿ ಶಿಥಿಲಾವಸ್ಥೆ ತಲುಪಿದ್ದು, ಈ ಶಾಲೆಯ ನವೀಕರಣವು ಉಜಿರೆಯ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್, ತಾಲೂಕು ಪತ್ರಕರ್ತರ ಸಂ, ಎಸ್‌ಡಿಎಂ ಕಾಲೇಜಿನ ಎನ್ನೆಸ್ಸೆಸ್ ಯೋಜನಾ ಘಟಕ, ಎನ್ನೆಸ್ಸೆಸ್ ಬೆಳ್ತಂಗಡಿ ವಲಯ, ನಿಡ್ಲೆ ಶಾಲೆಯ ಶಾಲಾಭಿವೃದ್ಧಿ ಸಮಿತಿ, ಹಳೇ ವಿದ್ಯಾರ್ಥಿ ಸಂಘ, ಊರವರು ಹಾಗೂ ಎಸ್‌ಡಿಎಂ ಸ್ಪೋರ್ಟ್ಸ್ ಕ್ಲಬ್ ಸಹಕಾರದಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net