

ಹುಬ್ಬಳ್ಳಿ: ಇಲ್ಲಿಯ ಕ್ಷೇತ್ರಿಯ ಭವಿಷ್ಯ ನಿಧಿ ಕಾರ್ಯಾಲಯದ ವತಿಯಿಂದ ಆ. 28ರಂದು ಬೆಳಗ್ಗೆ 9.30ರಿಂದ ಈ ಕೆಳಗಿನ ಜಿಲ್ಲಾ ಕೇಂದ್ರಗಳಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಹಾವೇರಿಯ ಎಂ.ಜಿ. ರಸ್ತೆ ಜೆ.ಪಿ. ಸರ್ಕಲ್ನಲ್ಲಿರುವ ವೀರಭದ್ರೇಶ್ವರ ಕಲ್ಯಾಣ ಮಂಟಪ, ಧಾರವಾಡದ ಬೆಳಗಾವಿ ರಸ್ತೆ ಬೇಲೂರು ಕೈಗಾರಿಕಾ ಪ್ರದೇಶದ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರದಲ್ಲಿ (ಸಿಡಾಕ್ ಪ್ಲಾಟ್ ನಂಬರ್ 1), ಗದಗನ ಬೆಂಗಳೂರು ರಸ್ತೆ ಮಲಸಮುದ್ರ ಹತ್ತಿರ ಅಂಜುಮನ್ ಇಸ್ಲಾಂ ಪಾಲಿಟೆಕ್ನಿಕ್ನಲ್ಲಿ.
ಬೆಳಗಾವಿಯ ಮೂಡಲಗಿ ತಾಲೂಕಿನ ಹುಣಶ್ಯಾಳದಲ್ಲಿರುವ ಸತೀಶ ಶುಗರ್ಸ್ ಲಿಮಿಟೆಡ್ನಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮಲ್ಲಾಪುರದ ಎನ್ಪಿಸಿಐಎಲ್ ಕೈಗಾ ಟೌನ್ಶಿಪ್ ಆಡಿಟೋರಿಯಂನಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮಗಳು ನಡೆಯಲಿವೆ.
ಸಂಬಂಧಿಸಿದ ಪಿಂಚಣಿದಾರರು, ಚಂದಾದಾರರು, ಉದ್ಯೋಗದಾತರು ಹಾಗೂ ಕಾಮಿರ್ಕ ಸಂಟನೆಯವರು ಇದರ ಪ್ರಯೋಜನ ಪಡೆಯಬೇಕೆಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ರಾಮಕೇಶ ಮೀನಾ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.