

ಹುಬ್ಬಳ್ಳಿ: ನೌಕರರ ಭವಿಷ್ಯ ನಿಧಿ ಸಂಘಟನೆಯ ಹುಬ್ಬಳ್ಳಿ ಪ್ರಾದೇಶಿಕ ಕಚೇರಿಯು ಜು. 27ರಂದು ಬೆಳಗ್ಗೆ 9.30ರಿಂದ ಸಂಜೆ 4 ಗಂಟೆಯವರೆಗೆ ಜಿಲ್ಲಾ ಕೇಂದ್ರಗಳಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ಆಯೋಜಿಸಿದೆ.
ಹಾವೇರಿ ಜಿಲ್ಲೆ ಹಿರೇಕೆರೂರಿನ ಬಾಳಂಬೀಡ್ ಕೌರವ ಎಜ್ಯುಕೇಶನ್ ಸೊಸೈಟಿ, ಧಾರವಾಡದ ರಡ್ಡಿ ಸಹಕಾರ ಬ್ಯಾಂಕ್, ಗದಗನ ಸಂಭಾಪುರ ರಸ್ತೆಯಲ್ಲಿರುವ ಸಂಕನೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬೆಳಗಾವಿ ಜಿಲ್ಲೆ ಹುಕ್ಕೇರಿಯ ಎಚ್ಎಲ್ಎಲ್ ಕಣಗಾಲ ಕಾರ್ಖಾನೆ, ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಕೋರ್ಟ್ ರಸ್ತೆ ಮಾಥೋಮಾ ಸೆಂಟ್ರಲ್ ಸ್ಕೂಲ್ನಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಬಂಧಿಸಿದ ಪಿಂಚಣಿದಾರರು, ಚಂದಾದಾರರು, ಉದ್ಯೋಗದಾತರು ಹಾಗೂ ಕಾರ್ವಿುಕ ಸಂಘಟನೆಯವರು ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತ ರಾಮಕೇಶ ಮೀನಾ ತಿಳಿಸಿದ್ದಾರೆ.