ನಿಡ್ತ ಸಹಕಾರ ಸಂಘಕ್ಕೆ 24.35 ಲಕ್ಷ ರೂ. ಲಾಭ

25ss2
Published on

ಶನಿವಾರಸಂತೆ: ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿಸಿದರೆ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ ಎಂದು ನಿಡ್ತ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಎಚ್.ಪಿ.ಶೇಷಾದ್ರಿ ಹೇಳಿದರು.

ಸಮೀಪದ ನಿಡ್ತ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ಸಾಲಿನಲ್ಲಿ ಸಂಘದ ವತಿಯಿಂದ 12.60 ಕೋಟಿ ರೂ. ಸಾಲ ವಿತರಿಸಲಾಗಿದೆ. ಇದರಲ್ಲಿ 11.79 ಕೋಟಿ ರೂ. ಕೆಸಿಸಿ ಸಾಲ ವಿತರಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ 24,35,765 ರೂ. ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.

ಸಂಘದ ವರದಿ ಮಂಡಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜೆ.ಮಂಜಪ್ಪ, ಸಂಘದಲ್ಲಿ ಒಟ್ಟು 2558 ಜನ ಸದಸ್ಯರಿದ್ದು, 1.40 ಕೋಟಿ ರೂ. ಷೇರು ಹಣವಿದೆ. ಸಂಘದ ಒಟ್ಟು ಬಂಡವಾಳ 17.26 ಕೋಟಿ ರೂ. ಇದೆ. ಸಂಘದ ಕ್ಷೇಮನಿಧಿ 65,85,043 ರೂ. ಇದೆ. ಸಂಘವು ಡಿಸಿಸಿ ಬ್ಯಾಂಕಿನಿಂದ 11.76 ಕೋಟಿ ರೂ. ಸಾಲ ಪಡೆದು ಪೂರ್ತಿ ಪಾವತಿಸಿದೆ. ಸಂಘದಲ್ಲಿ 75 ಸ್ವಸಹಾಯ ಗುಂಪುಗಳಿದ್ದು, ಗುಂಪಿನ ಉಳಿತಾಯ 10.24 ಲಕ್ಷ ರೂ. ಎಂದು ಮಾಹಿತಿ ನೀಡಿದರು.

ಮಹಾಸಭೆಯಲ್ಲಿ ಸಂಘದ ಪ್ರಗತಿ ಬಗ್ಗೆ ಚರ್ಚಿಸಲಾಯಿತು. ಸಂಘದ ಅಭಿವೃದ್ಧಿ ಮತ್ತು ಇತರ ವಿಷಯಗಳ ಕುರಿತು ಸಂಘದ ಹಿರಿಯ ನಿರ್ದೇಶಕ ಎನ್.ಬಿ.ನಾಗಪ್ಪ ಸಮಗ್ರ ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಸಿ.ಪಿ.ತೀರ್ಥಾನಂದ, ನಿರ್ದೇಶಕರಾದ ಎನ್.ಬಿ.ನಾಗಪ್ಪ, ಡಿ.ಬಿ.ಧರ್ಮಪ್ಪ, ಎಂ.ಎಸ್.ತಂಗಮ್ಮ, ಜಿ.ಬಿ.ಲಿಂಗರಾಜು, ಎಸ್.ಆರ್.ಕಾರ್ತಿಕ್, ಡಿ.ಎನ್.ಜಗದೀಶ್, ಎ.ಜೆ.ಪೊನ್ನಪ್ಪ, ಎಚ್.ಎಂ.ದೊಡ್ಡೇಗೌಡ, ಎನ್.ಆರ್.ಪುಟ್ಟಯ್ಯ, ಕೆಡಿಸಿಸಿ ಬ್ಯಾಂಕ್ ಮೇಲ್ವಿಚಾರಕಿ ಎಂ.ಕೆ.ಲಲಿತಾ, ಶನಿವಾರಸಂತೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಭರತ್‌ಕುಮಾರ್, ಸಂಘದ ಸಿಬ್ಬಂದಿ ಎಂ.ಈ.ಹೂವಣ್ಣ, ಎಚ್.ಆರ್.ಧರಣಿ, ಜೆ.ಯು.ಕೃಪಾ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net