ನಿಡವಂದ ಹಾಲು ಉತ್ಪಾದಕರ ಸಂಘಕ್ಕೆ ಕುಮಾರಸ್ವಾಮಿ ಅಧ್ಯಕ್ಷ

nidavanda election
Published on

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ

ಸೋಂಪುರ ಹೋಬಳಿಯ ನಿಡವಂದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಶುಕ್ರವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎನ್.ಆರ್.ಕುಮಾರಸ್ವಾಮಿ, ಉಪಾಧ್ಯಕ್ಷೆ ಸ್ಥಾನಕ್ಕೆ ಕಮಲಮ್ಮಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಭಾಸ್ಕರ್ ಘೋಷಿಸಿದರು. ನೂತನ ಅಧ್ಯಕ್ಷ ಎನ್.ಆರ್.ಕುಮಾರಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದ ಹೈನೋದ್ಯಮ ಸಾವಿರಾರು ಜನರಿಗೆ ಜೀವನಾಡಿಯಾಗಿದೆ. ನಗರದಲ್ಲಿ ಕೆಲಸ ಬಿಟ್ಟು ಗ್ರಾಮಕ್ಕೆ ಬಂದು, ಹಸುವನ್ನು ಸಾಕಿ, ಇಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಇದರಿಂದ ಸರ್ಕಾರಗಳು ಬೂಸಾ, ಹಿಂಡಿ ಹಾಗೂ ಪೀಡು, ಚಕ್ಕೇ ಬೂಸ ಎಂಬಿವುಗಳ ದರ ಹೆಚ್ಚು ಮಾಡಿದ್ದು, ಅದನ್ನು ಕಡಿತಗೊಳಿಸಿ, ಹಾಲಿನ ಪ್ರೋತ್ಸಾಹ ಧನವನ್ನು 5 ರೂ.ಗೆ ಏರಿಸುವಂತೆ ಬೆಂಗಳೂರು ಹಾಲು ಒಕ್ಕೂಟಕ್ಕೆ ಮನವಿ ಮಾಡಲಾಗುವುದು ಎಂದರು. ನಿರ್ದೇಶಕರಾದ ಚಿಕ್ಕೇಗೌಡ, ತಮ್ಮಯ್ಯ, ನಾಗರಾಜು, ಕೆಂಪರಾಜು, ರಾಮೇಗೌಡ, ರವಿಕುಮಾರ, ಸಾಕಮ್ಮ, ಗವಿಯಪ್ಪ, ಚನ್ನಬಸವಯ್ಯ, ರಾಜಕುಮಾರ, ಕಾರ್ಯನಿರ್ವಣಾಧಿಕಾರಿ ದಯಾನಂದ, ಸೋಂಪುರ ಗ್ರಾಪಂ ಉಪಾಧ್ಯಕ್ಷೆ ಪಿ.ಲಾವಣ್ಯಾ ಜಗದೀಶ್, ಸದಸ್ಯೆ ಇಂದ್ರಮ್ಮ ಪರಮೇಶ್, ಮುಖಂಡರಾದ ಎನ್.ಸಂತೋಷಕುಮಾರ, ಮಾಜಿ ಗ್ರಾಪಂ ಸದಸ್ಯರಾದ ಆರ್.ಪರಮೇಶ್, ಬಿ.ಕುಮಾರ, ಎನ್.ಟಿ.ಜಗದೀಶ, ಎನ್.ಯುವರಾಜ, ಎನ್.ಪ್ರಕಾಶ, ಎನ್.ಟಿ.ಭೋಜರಾಜ, ಆನಂದಕುಮಾರ, ಸೂರ್ಯಕುಮಾರ, ಪುಟ್ಟರಾಜು, ನಾರಾಯಣ, ಶ್ರೀನಿವಾಸ, ಗಂಗಾಧರಪ್ಪ, ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net