ಯಲಗೂರ- ಬಳಬಟ್ಟಿ ಎರಡು ಗ್ರಾಪಂಗಳ 24 ಸ್ಥಾನಗಳ ಫಲಿತಾಂಶ

Nidagundi-Yalagura-Balabatti- Gram Panchayat- Election, Result,
ನಿಡಗುಂದಿ ಪಟ್ಟಣದಲ್ಲಿ ಚುನಾವಣೆ ಲಿತಾಂಶ ಘೋಷಣೆಯಾಗುತ್ತಿದ್ದಂತೆ ತಾಲೂಕಿನ ಬಳಬಟ್ಟಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ನೂತನ ಸದಸ್ಯರು, ಅಭಿಮಾನಿಗಳು, ಕಾರ್ಯಕರ್ತರು ಪರಸ್ಪರ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು. ಮಲ್ಲಿಕಾರ್ಜುನ ಹೂಗಾರ, ಯಲಗೂರೇಶ ಅರಮನಿ, ಚಂದ್ರಪ್ಪ ಪೂಜಾರಿ ಇತರರಿದ್ದರು.
Published on

ನಿಡಗುಂದಿ: ತಾಲೂಕಿನ ಯಲಗೂರ ಹಾಗೂ ಬಳಬಟ್ಟಿ ಗ್ರಾಮ ಪಂಚಾಯಿತಿಗಳ ಸದಸ್ಯರ ಆಯ್ಕೆ ಚುನಾವಣೆಯ ಮತ ಎಣಿಕೆ ಬುಧವಾರ ನಡೆದು 24 ಸ್ಥಾನಗಳ ಲಿತಾಂಶ ಪ್ರಕಟವಾಯಿತು.

ಯಲಗೂರ ಗ್ರಾಮದ 15 ಸ್ಥಾನಗಳು ಹಾಗೂ ಬಳಬಟ್ಟಿ ಗ್ರಾಮದ 11 ಸ್ಥಾನಗಳು ಸೇರಿ ಒಟ್ಟು 26 ಸ್ಥಾನಗಳಲ್ಲಿ ತಲಾ ಒಂದೊಂದರಲ್ಲಿ ಒಬ್ಬೊಬ್ಬರು ಅವಿರೋಧ ಆಯ್ಕೆಯಾಗಿದ್ದರು. ಉಳಿದ 24 ಸ್ಥಾನಗಳಿಗೆ 66 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಯಲಗೂರ ಗ್ರಾಮ ಪಂಚಾಯಿತಿಯ ವಾರ್ಡ್ ಸಂಖ್ಯೆ 1ರಲ್ಲಿನ ಸಾಮಾನ್ಯ ಸ್ಥಾನಕ್ಕೆ- ಬಸವರಾಜ ಹೂಗಾರ, ಹಿಂದುಳಿದ ವರ್ಗ ಅ ಮಹಿಳೆ ಸ್ಥಾನಕ್ಕೆ- ನಿರ್ಮಲಾ ಶ್ರೀಶೈಲ ಬೆಳಗಲ್, ಸಾಮಾನ್ಯ ಮಹಿಳೆ ಸ್ಥಾನಕ್ಕೆ- ಶಾಂತಾಬಾಯಿ ಮಂಜುನಾಥ ಪವಾರ ಜಯ ಸಾಧಿಸಿದ್ದಾರೆ.

ವಾರ್ಡ್ ಸಂಖ್ಯೆ 2ರಲ್ಲಿ ಸಾಮಾನ್ಯ ಸ್ಥಾನಕ್ಕೆ- ರಂಗನಾಥ ಭೀಮಣ್ಣ ಪೂಜಾರಿ, ಅನುಸೂಚಿತ ಪಂಗಡ ಮಹಿಳೆ ಸ್ಥಾನಕ್ಕೆ- ಶ್ರುತಿ ಭೀಮಣ್ಣ ತಳವಾರ, ಅನುಸೂಚಿತ ಜಾತಿ ಸ್ಥಾನಕ್ಕೆ- ಗೋಪಾಲ ಮಾದರ ಗೆಲುವು ಸಾಧಿಸಿದ್ದಾರೆ. ವಾರ್ಡ್ ಸಂಖ್ಯೆ 3ರಲ್ಲಿ ಹಿಂದುಳಿದ ವರ್ಗ ಅ ಮಹಿಳೆ ಸ್ಥಾನಕ್ಕೆ- ಜಯಶ್ರೀ ವಿಠ್ಠಲ ಅಮಾತಿಗೌಡರ, ಸಾಮಾನ್ಯ ಮಹಿಳೆ ಸ್ಥಾನಕ್ಕೆ- ಚಂದ್ರಮ್ಮ ಬಸವರಾಜ ಅಮಾತಿಗೌಡರ, ಸಾಮಾನ್ಯ ಸ್ಥಾನಕ್ಕೆ- ಪುಂಡಪ್ಪ ಶಿವಪ್ಪ ವಾಲಿಕಾರ, ಹಿಂದುಳಿದ ವರ್ಗ ಬ ಸ್ಥಾನಕ್ಕೆ - ಶ್ರೀಶೈಲ ನಾಶಿ ವಿಜಯ ಸಾಧಿಸಿದ್ದಾರೆ. ವಾರ್ಡ್ ಸಂಖ್ಯೆ 4ರಲ್ಲಿ ಸಾಮಾನ್ಯ ಮಹಿಳೆ ಸ್ಥಾನಕ್ಕೆ- ಲಕ್ಷ್ಮೀಬಾಯಿ ಹಣಮಂತ ಬಿರಾದಾರ, ಹಿಂದುಳಿದ ವರ್ಗ ಅ ಸ್ಥಾನಕ್ಕೆ- ಯಲಗೂರದಪ್ಪ ಪುಂಡಪ್ಪ ಸೀತಿಮನಿ, ಅನುಸೂಚಿತ ಜಾತಿ ಮಹಿಳೆ ಸ್ಥಾನಕ್ಕೆ- ರೇಣುಕಾ ನೀಲಪ್ಪ ಚಲವಾದಿ ಆಯ್ಕೆಯಾಗಿದ್ದಾರೆ. ವಾರ್ಡ್ ಸಂಖ್ಯೆ 5ರಲ್ಲಿ ಸಾಮಾನ್ಯ ಮಹಿಳೆ ಸ್ಥಾನಕ್ಕೆ- ಭರಮವ್ವ ತಿಪ್ಪಣ್ಣ ಪೂಜಾರಿ, ಸಾಮಾನ್ಯ ಸ್ಥಾನಕ್ಕೆ- ಮಲ್ಲಿಕಾರ್ಜುನ ಸಂಗಪ್ಪ ವಾಲಿಕಾರ ಗೆಲುವು ಪಡೆದಿದ್ದಾರೆ.

ಬಳಬಟ್ಟಿ ಗ್ರಾಮ ಪಂಚಾಯಿತಿಗೆ ನೂತನವಾಗಿ 11 ಸದಸ್ಯರು ಆಯ್ಕೆಯಾಗಿದ್ದಾರೆ. ವಾರ್ಡ್ ಸಂಖ್ಯೆ1ರಲ್ಲಿ ಹಿಂದುಳಿದ ವರ್ಗ ಅ ಮಹಿಳೆ ಸ್ಥಾನಕ್ಕೆ- ರೇಣುಕಾ ಯಲ್ಲಪ್ಪ ಆಸಂಗಿ, ಸಾಮಾನ್ಯ ಮಹಿಳೆ ಸ್ಥಾನಕ್ಕೆ- ಚನ್ನವ್ವ ಮುತ್ತಪ್ಪ ಕಲಾದಗಿ, ಸಾಮಾನ್ಯ ಸ್ಥಾನಕ್ಕೆ ಹಣಮವ್ವ ದೊಡ್ಡಬಸಪ್ಪ ಗಣಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ಸಂಖ್ಯೆ 2ರಲ್ಲಿ ಅನುಸೂಚಿತ ಜಾತಿ ಮಹಿಳೆ ಸ್ಥಾನಕ್ಕೆ- ದುರಗವ್ವ ಚಂದ್ರಶೇಖರ ಮಾದರ, ಸಾಮಾನ್ಯ ಮಹಿಳೆ ಸ್ಥಾನಕ್ಕೆ- ಶಾಂತಾ ಜಯಪ್ಪ ದಡ್ಡಿ, ಸಾಮಾನ್ಯ ಸ್ಥಾನಕ್ಕೆ- ಮಂಜುಳಾ ರೇವಣಸಿದ್ದ ದಡ್ಡಿ ಜಯಗಳಿಸಿದ್ದಾರೆ. ವಾರ್ಡ್ ಸಂಖ್ಯೆ 3ರಲ್ಲಿ ಅನುಸೂಚಿತ ಪಂಗಡ ಮಹಿಳೆ ಸ್ಥಾನಕ್ಕೆ- ರಾಮವ್ವ ಹಣಮಂತ ಚಲವಾದಿ, ಹಿಂದುಳಿದ ವರ್ಗ ಅ ಸ್ಥಾನಕ್ಕೆ- ಮಲ್ಲಿಕಾರ್ಜುನ ಶಿವಪ್ಪ ಹೂಗಾರ, ಸಾಮಾನ್ಯ ಸ್ಥಾನಕ್ಕೆ- ಯಲಗೂರೇಶ ಸಂಗಪ್ಪ ಅರಮನಿ ಗೆಲುವು ಪಡೆದಿದ್ದಾರೆ. ವಾರ್ಡ್ ಸಂಖ್ಯೆ 4ರಲ್ಲಿ ಅನುಸೂಚಿತ ಜಾತಿ ಸ್ಥಾನಕ್ಕೆ- ಚಂದ್ರಪ್ಪ ಸಂಜೀವಪ್ಪ ಪೂಜಾರಿ, ಸಾಮಾನ್ಯ ಮಹಿಳೆ ಸ್ಥಾನಕ್ಕೆ ಶಂಕ್ರಮ್ಮ ಬಸಪ್ಪ ಹುಬ್ಬಳ್ಳಿ ಆಯ್ಕೆಯಾಗಿದ್ದಾರೆ ಎಂದು ತಹಸೀಲ್ದಾರ್ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net