ನಿಡಗುಂದಿ ತಾಪಂ ಇಒ ವೆಂಕಟೇಶ ವಂದಾಲ ಎಚ್ಚರಿಕೆ

Nidagundi Tamam EO Venkatesh Vandala alert
ವೆಂಕಟೇಶ ವಂದಾಲ
Published on

ಗೊಳಸಂಗಿ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ ವಸೂಲಿ ಸರಿಯಾಗಿ ಆಗದಿದ್ದರೆ ಆಯಾ ಗ್ರಾಪಂ ಪಿಡಿಒ, ಕಾರ್ಯದರ್ಶಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನಿಡಗುಂದಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ ಹೇಳಿದರು.

ಗೊಳಸಂಗಿ ಗ್ರಾಮ ಪಂಚಾಯಿತಿಗೆ ಇತ್ತೀಚೆಗೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕರ ವಸೂಲಾತಿ ಪಿಡಿಒ ಮತ್ತು ಕಾರ್ಯದರ್ಶಿಗಳ ಕಾರ್ಯದ ಭಾಗ. ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ವಸೂಲಿ ಮಾಡದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.

ಬಹುತೇಕ ಗ್ರಾಮಸ್ಥರು ಕರ ಪಾವತಿಸಲು ಹಿಂದೇಟು ಹಾಕುತ್ತಿರುವ ಪರಿಣಾಮ ಬೀದಿ ದೀಪ, ರಸ್ತೆ ಸುಧಾರಣೆ, ಮತ್ತಿತರ ಕೆಲಸಗಳ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಗ್ರಾಪಂಗಳಲ್ಲಿ ದುಡಿಯುವ ಸಿಬ್ಬಂದಿ ಸಂಬಳಕ್ಕೂ ಹೊಡೆತ ಬೀಳುತ್ತಿದೆ. ಇದನ್ನರಿತು ಗ್ರಾಮಸ್ಥರು ಸಕಾಲಕ್ಕೆ ತಮ್ಮ ಮನೆಗಳ ವಾರ್ಷಿಕ ಕರ ಪಾವತಿ ಮಾಡಬೇಕು ಎಂದು ಮನವಿ ಮಾಡಿದರು.

ಗ್ರಾಪಂ ಸಿಬ್ಬಂದಿ ರವಿ ಬುಜಂಗೋಳ, ದುಂಡೇಶ ಮಮದಾಪೂರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net