ನಿಡಗುಂದಾ; ರಸ್ತೆ ಕಾಮಗಾರಿಗೆ ಬಿಡಿ, ಜನರಿಗೆ ಕುಡಿಯಲು ನೀರು ಕೊಡಿ; ಸಿದ್ದಲಿಂಗ

ಸಿದ್ದಲಿಂಗ ನಿಡಗುಂದಾ
Published on

ಚಿಂಚೋಳಿ: ನಿಡಗುಂದಾ ಗ್ರಾಮ ಪಂಚಾಯಿತಿಯು ಅಕ್ರಮವಾಗಿ ಕುಡಿಯುವ ನೀರನ್ನು ರಸ್ತೆ ಕಾಮಗಾರಿಗೆ ಪೂರೈಕೆ ಮಾಡುತ್ತಿದ್ದು, ಜನ ಸಾಮಾನ್ಯರಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸದೆ ವಂಚಿಸುತ್ತಿದ್ದಾರೆ ಎಂದು ಸಿದ್ದಲಿಂಗ ನಿಡಗುಂದಾ ಗಂಭೀರವಾಗಿ ಆರೋಪಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಶ್ರಮಿಸಬೇಕಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿ ಸಮಪರ್ಕವಾಗಿ ಪೂರೈಸದೇ, ನಿಡಗುಂದಾ ಬಳಿ ರಸ್ತೆ ಕಾಮಗಾರಿಗೆ ಅಕ್ರಮವಾಗಿ ನೀರು ಪೂರೈಕೆ ಮಾಡುತ್ತಿದ್ದಾರೆ. ಕೂಡಲೇ ತಡೆದು ಜನ ಸಾಮಾನ್ಯರಿಗೆ ನೀರು ಪೂರೈಸಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net