ನೈಸ್ ಕಂಪನಿಗೆ ನೀಡಿದ ಭೂಮಿ ವಾಪಸ್ ಕೊಡಿ

01 gvt 03
ಗಂಗಾವತಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ತಹಸೀಲ್ದಾರ್ ಯು.ನಾಗರಾಜ್ಗೆ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಶಿವಣ್ಣ ಬೆಣಕಲ್, ಪದಾಧಿಕಾರಿಗಳಾದ ಶ್ರೀನಿವಾಸ, ಮುತ್ತಣ್ಣ ದಾಸನಾಳ ಸೇರಿದಂತೆ ಹಲವರು ಇದ್ದರು.
Published on

ಗಂಗಾವತಿ: ನೈಸ್ ಕಂಪನಿಗೆ ರೈತರಿಂದ ಬಲವಂತದಿಂದ ಭೂಸ್ವಾಧೀನ ಮಾಡಿಕೊಳ್ಳುವ ಪ್ರಕರಣಗಳನ್ನು ರದ್ದುಪಡಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಯು.ನಾಗರಾಜ್ಗೆ ಮನವಿ ಸಲ್ಲಿಸಿದರು.

ಸಂಘದ ತಾಲೂಕು ಅಧ್ಯಕ್ಷ ಶಿವಣ್ಣ ಬೆಣಕಲ್ ಮಾತನಾಡಿ, ನೈಸ್ ಕಂಪನಿಗೆ ರೈತರಿಂದ ಬಲವಂತವಾಗಿ ಭೂಮಿ ಕೊಡಿಸಲು ಸರ್ಕಾರ ಹುನ್ನಾರ ನಡೆಸಿದೆ. ಸರ್ಕಾರವು ಈ ಯೋಜನೆಯಲ್ಲಿ ನೈಸ್ ಕಂಪನಿಯ ಪಾಲುದಾರಿಕೆಯನ್ನು ರದ್ದುಪಡಿಸಬೇಕು. ರೈತರ ಒಪ್ಪಿಗೆ ಇಲ್ಲದ ಭೂಸ್ವಾಧೀನ ಪ್ರಕರಣಗಳನ್ನು ರದ್ದುಪಡಿಸಿ,

ನೈಸ್ ಕಂಪನಿಗೆ ನೀಡಿದ ಭೂಮಿಯನ್ನು ವಾಪಸ್ ಪಡೆದು, ಆ ಭೂಮಿಯಲ್ಲಿ ವಸತಿ ರಹಿತರಿಗೆ ನಿವೇಶಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಶ್ರೀನಿವಾಸ ಹೊಸಳ್ಳಿ, ಮುತ್ತಣ್ಣ ದಾಸನಾಳ, ಗಾದೆಪ್ಪ ಬೆಣಕಲ್, ದುರುಗಪ್ಪ ದಾಸನಾಳ, ಮಂಜುನಾಥ ಡಗ್ಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net