ವಿದೇಶಕ್ಕೆ ನೌಕಾಸೇನೆ ಮಾಹಿತಿ ರವಾನೆ: 2 ಗುತ್ತಿಗೆ ನೌಕರರು NIA ವಶಕ್ಕೆ

Nia (1)
Published on

ಕಾರವಾರ: ದೇಶದ್ರೋಹಿಗಳಿಗೆ ಭಾರತೀಯ ನೌಕಾಸೇನೆಯ ಗುಪ್ತ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದ ಆರೋಪದ ಮೇಲೆ ಕಾರವಾರ ಮುದಗಾದ ಚೇತನ ತಾಂಡೇಲ ಎಂಬಾತನನ್ನು ಬಂಧಿಸಲಾಗಿದೆ.

ರಾಷ್ಟ್ರೀಯ ತನಿಖಾ ದಳದ(ಎನ್ ಐಎ) ಹೈದ್ರಾಬಾದ್ ನ ಮೂವರು ಡಿಎಸ್ ಪಿ ಗಳು ಸೇರಿ 6 ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ.

ಸೋಮವಾರ ಬೆಳಗ್ಗೆಯೇ ಶಹರ ಠಾಣೆಗೆ ಆಗಮಿಸಿದ ಅವರು ಮಾಹಿತಿ ಕಲೆ ಹಾಕಿದ್ದರು.

ಮಂಗಳವಾರ ಬೆಳಗ್ಗೆ ಪಂಚರು, ಸ್ಥಳೀಯ ಅಧಿಕಾರಿಗಳ ಜತೆ ದಾಳಿ ನಡೆಸಿದ್ದಾರೆ.

2024 ರ ಆಗಸ್ಟ್ ನಲ್ಲಿ ಚೇತನ್ ತಾಂಡೇಲ ಹಾಗೂ ಇನ್ನೂ ಇಬ್ಬರನ್ನು ಕರೆಸಿ, ವಿಚಾರಣೆ ನಡೆಸಿದ್ದರು. ಚೇತನ್ ತಾಂಡೇಲ್ ಗೆ ನೋಟಿಸ್ ನೀಡಿ ವಾಪಸಾಗಿದ್ದರು.

ಚೇತನ ತಾಂಡೇಲ ಹೊರ ಗುತ್ತಿಗೆ ಉದ್ಯೋಗಿಯಾಗಿದ್ದು, ಆತ ಐಎನ್ ಎಸ್ ವಿಕ್ರಮಾದಿತ್ಯಾ ನೌಕೆಯ ಮಾಹಿತಿಯನ್ನು ಮುಂಬೈನ ವ್ಯಕ್ತಿಯೊಬ್ಬರಿಗೆ ಕಳಿಸಿದ್ದ. ಅವರಿಂದ ಅದಕ್ಕೆ ಹಣ ಬಂದಿತ್ತು.

ನೌಕಾಸೇನೆಯ ಗುಪ್ತ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿರುವ ಬಗ್ಗೆ ಮೂರು ವರ್ಷಗಳಿಂದ ತನಿಖೆ ನಡೆಸಿರುವ ಎನ್ ಐಎ ಇದುವರೆಗೆ ಮೂರು ಚಾರ್ಜ್ ಶೀಟ್ ಸಲ್ಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net