

ಕಾರವಾರ: ಉಗ್ರರ ಜತೆ ನಂಟು ಹೊಂದಿದ್ದ ಆರೋಪದ ಮೇಲೆ ಶಿರಸಿಯಲ್ಲಿ ಒಬ್ಬನನ್ನು ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ( ಎನ್ ಐಎ) ಮಂಗಳವಾರ ವಶಕ್ಕೆ ಪಡೆದಿದೆ.
ಶಿರಸಿಯ ದಾಸನಕೊಪ್ಪದ ಅಬ್ದುಲ್ ಶಕೂರ್ ಬಂಧಿತ. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಗಲಭೆ ಸೃಷ್ಟಿಸುವ ಸಂದೇಶ ಹರಿಬಿಟ್ಟ ಆರೋಪವೂ ಆತನ ಮೇಲಿದೆ.
ದುಬೈನಲ್ಲಿ ಉದ್ಯೋಗದಲ್ಲಿದ್ದ ಆತ ಬಕ್ರೀದ್ ಹಬ್ಬಕ್ಕಾಗಿ ಊರಿಗೆ ಆಗಮಿಸಿದ್ದ.
ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ್ದ ಐವರು ಅಧಿಕಾರಿಗಳ ತಂಡ ಆತನನ್ನು ವಶಕ್ಕೆ ಪಡೆದಿದೆ ಎನ್ನಲಾಗಿದೆ.