ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಂಟೈನರ್ ಗಳ ಮುಖಾಮುಖಿ ಡಿಕ್ಕಿ ಇಬ್ಬರ ಸಾವು

IMG-20200225-WA0004.jpg
Published on

ಆಲೂರು : ಎರಡು ಕಂಟೈನರ್ ಗಳ ನಡುವೆ ಮುಖಾಮುಖಿ ಡಿಕ್ಕಿಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಮುಂಜಾನೆ 5 ಗಂಟೆ ಸುಮಯದಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ಸಿಂಗಾಪುರ ಬಳಿ ನಡೆದಿದೆ.

ಕಂಟೈನರ್ ಗಳ ಮುಖಾಮುಖಿ ಡಿಕ್ಕಿಯಿಂದ ಇಬ್ಬರು ಮೃತ ಪಟ್ಟಿರುವ ಘಟನೆ ನೆಡೆದಿದೆ. ಸಕಲೇಶಪುರದ ತಾಲೂಕಿನ ಜಾತಹಳ್ಳಿ ಗ್ರಾಮದ

ದಿಲೀಪಗೌಡ(25) ಹಾಗೂ ಆಲೂರು ತಾಲ್ಲೂಕಿನ ಅಚನಹಳ್ಳಿ ಚಂದ್ರಶೇಖರ(36) ಮೃತ ದುರ್ದೈವಿಗಳು.

ಅಪಘಾತದ ರಭಸಕ್ಕೆ ಮೃತರ ದೇಹಗಳು ಕಂಟೈನರ್ ಒಳಗೆ ಸಿಲುಕಿ ಗುರುತು ಹಿಡಿಯಲು ಸಾಧ್ಯವಾಗಷ್ಟು ಛಿದ್ರವಾಗಿವೆ. ಸ್ಥಳಕ್ಕೆ ಆಲೂರು ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಮೃತ ದೇಹಗಳನ್ನು ಹೊರತೆಗೆಯಲು ಹರಸಾಹಸಪಡುತ್ತಿದ್ದಾರೆ.

ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿದೆ. ರಸ್ತೆ ಅಗಲೀಕರಣಕ್ಕೆಂದು ರಸ್ತೆಯ ಒಂದು ಬದಿಯ ಮಣ್ಣನ್ನು ಇನ್ನೊಂದು ಬದಿಯಲ್ಲಿ ಬೆಟ್ಟದಂತೆ ಹಾಕಿರುವುದರಿಂದ ಕಿರಿದಾದ ರಸ್ತೆಯಲ್ಲಿ ವಾಹನಗಳ ಸಂಚಾರ ಕಷ್ಟಕರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net