

ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಮಟಾ-ಅಂಕೋಲಾ ನಡುವೆ ಅರ್ಧ ತಿಂಗಳಿಂದ ಬಂದಾಗಿರುವ ವಾಹನ ಸಂಚಾರ ಬುಧವಾರ ರಾತ್ರಿಯಿಂದ ಪುನರಾರಂಭಗೊಂಡಿದೆ. ಹೆದ್ದಾರಿ ವಾಹನ ಸಂಚಾರಕ್ಕೆ ಲಾರಿ, ಬಸ್ ಮಾಲೀಕರಿಂದ ತೀವ್ರ ಒತ್ತಡವಿತ್ತು.
ಷರತ್ತುಗಳು ಅನ್ವಯ
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ,. "ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ ತಜ್ಞರು ಸ್ಥಳ ಭೇಟಿ ಮಾಡಿ ಪ್ರಾಥಮಿಕ ವರದಿ ನೀಡಿದ್ದು, ವಾಹನ ಸಂಚಾರಕ್ಕೂ ಪೂರ್ವ ಕೆಲವು ತುರ್ತು ಕ್ರಮ ವಹಿಸುವಂತೆ ಸೂಚಿಸಿದ್ದರು. ಅವರ ವರದಿಯಲ್ಲಿರುವ ಕಾಮಗಾರಿಗಳನ್ನು ಕೈಗೊಂಡು ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊನ್ನಾವರ ಯೋಜನಾ ನಿರ್ದೇಶಕರಿಗೆ ಆದೇಶ ನೀಡಿದ್ದೆ. ಅವರು ಕ್ರಮ ವಹಿಸಿ ವರದಿ ನೀಡಿದ್ದು ಅದರಂತೆ ಕ್ರಮ ವಹಿಸಲು ಎಸ್ ಪಿ ಅವರಿಗೆ ಸೂಚಿಸಲಾಗಿದೆ ಎಂದರು.
ಕ್ರಮಗಳು: