

ಮಂಗಳೂರು: ಪರಿಹಾರ ಪಾವತಿಸಿದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 169 ಸಾಣೂರು- ಬಿಕರ್ನಕಟ್ಟೆ ಇಕ್ಕೆಲಗಳ ಜನರ ಕಟ್ಟಡಗಳ ತೆರವು ಕಾರ್ಯಾಚರಣೆ ಕುಡುಪಿನಲ್ಲಿ ಭಾನುವಾರ ಆರಂಭಗೊಂಡಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಿಶೇಷ ಭೂಸ್ವಾಧೀನ ಅಧಿಕಾರಿ ಬಿನೋಯ್, ಸಹಾಯಕ ಆಯುಕ್ತ ಮದನ್ ಮೋಹನ್, ತಹಸೀಲ್ದಾರ್ ಪುರಂದರ ಹೆಗಡೆ, ಗುತ್ತಿಗೆ ವಹಿಸಿರುವ ದಿಲೀಪ್ ಬಿಲ್ಡ್‌ಕಾನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಟಿ.ರಾಘವ ರಾವ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಸ್ತಾವಿತ ಯೋಜನೆಯಲ್ಲಿ ಇಲ್ಲಿಯ ತನಕ 280 ಕೋಟಿ ರೂ ಪರಿಹಾರ ವಿತರಿಸಲಾಗಿದ್ದು, ಪರಿಹಾರ ಪಾವತಿಯಾದ ಕಟ್ಟಡಗಳ ತೆರವು ನಡೆಯುತ್ತಿದೆ.
ಪ್ರಸ್ತುತ ಸಾಣೂರು ಮತ್ತು ಬಿಕರ್ನಕಟ್ಟೆ ನಡುವೆ ವಾಹನ ಮೂಲಕ ಸಂಚರಿಸಲು 1.30 ಗಂಟೆ ಅವಧಿ ಅಗತ್ಯವಿದ್ದು, ಚತುಷ್ಪಥ ಕಾಮಗಾರಿ ಪೂರ್ಣಗೊಂಡ ಬಳಿಕ ಈ ದೂರವನ್ನು ಕೇವಲ 30 ನಿಮಿಷದಲ್ಲಿ ತಲುಪಬಹುದಾಗಿದೆ ಎಂದು ವಿಶೇಷ ಭೂಸ್ವಾಧೀನ ಅಧಿಕಾರಿ ಬಿನೋಯ್ ತಿಳಿಸಿದ್ದಾರೆ.