ಎನ್‌ಜಿಒ ಸಂಘ ಕಾಸರಗೋಡು ಜಿಲ್ಲಾ ಪರಿಷತ್ ಸಭೆ

Ksd_NGO
Published on

ಕಾಸರಗೋಡು: ಎನ್‌ಜಿಒ ಸಂಘದ 40ನೇ ಜಿಲ್ಲಾ ಸಮ್ಮೇಳನದ ಅಂಗವಾಗಿ ಜಿಲ್ಲಾ ಪರಿಷತ್ ಸಭೆ ಕಾಸರಗೋಡು ಕರಂದಕ್ಕಾಡಿನ ಎನ್‌ಜಿಒ ಸಂಘದ ಸಭಾಂಗಣದಲ್ಲಿ ಜರುಗಿತು. ಎನ್‌ಜಿಒ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಪಿ.ಪೀತಾಂಬರನ್ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ರಂಜಿತ್ ಅಧ್ಯಕ್ಷತೆ ವಹಿಸಿದ್ದರು.

ನಾಲ್ಕು ವರ್ಷಗಳ ಹಿಂದೆಯೇ ಮಂಜೂರು ಮಾಡಬೇಕಿದ್ದ ಕ್ಷಾಮಭತ್ಯೆಯ ಒಂದು ಕಂತು ಮಂಜೂರು ಮಾಡಿದ ನಂತರ, ಅದರ ಹಿಂದಿನ ಸವಲತ್ತು ಕಸಿದುಕೊಂಡಿರುವ ಸರ್ಕಾರದ ಧೋರಣೆ ಖಂಡನೀಯ ಎಂದು ಸಭೆ ಅಭಿಪ್ರಾಯಪಟ್ಟಿತು. ಪ್ರತಿ ತಿಂಗಳಿನಂತೆ 117 ತಿಂಗಳ ಕಾಲ ನೀಡಬೇಕಾದ ಬಾಕಿಮೊತ್ತ ನೀಡಲು ಸರ್ಕಾರ ನಿರಾಕರಿಸಿದೆ. ಈ ನಿಟ್ಟಿನಲ್ಲಿ 35 ಸಾವಿರ ಕೋಟಿ ರೂ. ಮೊತ್ತವನ್ನು ಸರ್ಕಾರ ಬಾಕಿಯಿರಿಸಿಕೊಂಡಿದೆ ಎಂದು ಕಳವಳ ವ್ಯಕ್ತವಾಯಿತು.

2024ರ ಏಪ್ರಿಲ್-ಅಕ್ಟೋಬರ್ ಹಾಗೂ 2025ರಲ್ಲಿನ ಬಾಕಿಯಿರಿಸಿಕೊಂಡಿರುವ ತುಟ್ಟಿಭತ್ಯೆಯನ್ನು ತಕ್ಷಣ ನೀಡಲು ಸರ್ಕಾರ ಮುಂದಾಗುವಂತೆ ಸಭೆ ಆಗ್ರಹಿಸಿತು. ಜಿಲ್ಲಾ ಕಾರ್ಯದರ್ಶಿ ವಿ.ಶ್ಯಾಮ್ ಪ್ರಸಾದ್ ವರದಿ ಹಾಗೂ ಕೋಶಾಧಿಕಾರಿ ರವಿಕುಮಾರ್ ಲೆಕ್ಕಪತ್ರ ಮಂಡಿಸಿದರು. ಸುನೀಲ್ ಪಿ.ಸಿ. ಸ್ವಾಗತಿಸಿದರು. ಅಭಿಲಾಷ್, ಕಾರ್ತಿಕಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net