

ಹುಬ್ಬಳ್ಳಿ: ಇಲ್ಲಿಯ ನ್ಯೂ ಗವರ್ನಮೆಂಟ್ ಇಲೆಕ್ಟ್ರಿಕ್ ಫ್ಯಾಕ್ಟರಿ (ಎನ್ ಜಿಇಎಫ್) ವಿದೇಶದಿಂದಲೂ ಟ್ರಾನ್ಸಫಾರ್ಮರ್ (ಟಿಸಿ) ಉತ್ಪಾದನೆಗೆ ಆದೇಶ ಪಡೆಯುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪನೆ ಮಾಡಿದೆ.
ಉಗಾಂಡಾ ಸಕ್ಕರೆ ಕಾರ್ಖಾನೆಗೆ ಬೇಕಾದ 5 ಸಾವಿರ ಕೆವಿಎ ಸಾಮರ್ಥ್ಯದ ಟ್ರಾನ್ಸಫಾರ್ಮರ್ ಪೂರೈಸುವ ಬೇಡಿಕೆ ಬಂದಿದೆ.
ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟ ಹಾಗೂ ನಂಬಿಕೆ ಉಳಿಸಿಕೊಂಡಿರುವ ಎನ್ ಜಿಇಎಫ್ ಗೆ ಇದು ಹೊಸ ಅವಕಾಶವನ್ನು ಒದಗಿಸಿದಂತಾಗಿದೆ. ಇದನ್ನು ಕಂಪನಿ ಸಿಬ್ಬಂದಿಯ ಸಹಕಾರ, ಸರ್ಕಾರದ ಬೆಂಬಲದೊಂದಿಗೆ ಸಮರ್ಪಕವಾಗಿ ನಿರ್ವಹಿಸಿ ಇನ್ನಷ್ಟು ವಿಶ್ವಾಸ ಗಳಿಸುವ ಕೆಲಸ ಮಾಡಲಾಗುವುದು ಎಂದು ಕಂಪನಿ ಎಂಡಿ ಎಸ್.ಎಚ್. ನರೇಗಲ್ಲ ತಿಳಿಸಿದ್ದಾರೆ.