ಮುಂದಿನ ವರ್ಷ ಮದ್ದೂರು ಚಿತ್ರಣವೇ ಬದಲು

03M.D.R.4
ಮದ್ದೂರು ಪಟ್ಟಣದ ಸಿದ್ಧಾರ್ಥ ನಗರದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಭೂಮಿಪೂಜೆ ನೆರವೇರಿಸಿದರು. ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಎಂ.ಬಿ.ಸಚಿನ್, ಸಿದ್ದರಾಜು ಕಮಲನಾಥ್, ಮುನ್ಸೂರ್ ಖಾನ್, ಅಸ್ಲಾಂಪಾಷ, ಇಂತಿಯಾಜ್ ವುಲಾಖಾನ್ ಇದ್ದರು.
Published on

ಮದ್ದೂರು: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂದಿನ ವರ್ಷದೊಳಗಾಗಿ ಪಟ್ಟಣದ ಚಿತ್ರಣವೇ ಬದಲಾಗಲಿದೆ ಎಂದು ಶಾಸಕ ಕೆ.ಎಂ ಉದಯ್ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಸಿದ್ಧಾರ್ಥ ನಗರದಲ್ಲಿ ಭಾನುವಾರ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಶಾಶ್ವತ ಯೋಜನೆಗಳ ಜತೆಗೆ ಪಟ್ಟಣದ ಸಮಗ್ರ ಅಭಿವೃದ್ಧಿ ಕೈಗೊಳ್ಳಬೇಕೆಂಬ ಉದ್ದೇಶದಿಂದ ಸರ್ಕಾರಕ್ಕೆ 300 ಕೋಟಿ ರೂ.ಪ್ರಸ್ತಾವನೆ ಸಲ್ಲಿಸಿದ್ದು, ಹಂತ ಹಂತವಾಗಿ ಹಣ ಬಿಡುಗಡೆಗೊಳ್ಳಲಿದೆ ಎಂದರು.

ಪಟ್ಟಣದ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸಬೇಕೆಂಬ ಉದ್ದೇಶದೊಂದಿಗೆ ಪೇಟೆ ಬೀದಿ ರಸ್ತೆ ವಿಸ್ತರಣೆ ಸಂಬಂಧ ಸರ್ವೇ ಕಾರ್ಯ ನಡೆಯುತ್ತಿದೆ. ಮುಂದಿನ ವರ್ಷದೊಳಗೆ ಪಟ್ಟಣದ ಚಿತ್ರಣವನ್ನು ಬದಲಾಯಿಸಿ ಜನರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ಯುಜಿಡಿ, ಸಂಪರ್ಕ ರಸ್ತೆ, ಚರಂಡಿ, ಕಾಂಕ್ರೀಟ್ ರಸ್ತೆ, ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ಇತರ ಸೌಲಭ್ಯ ಕಲ್ಪಿಸುವ ಜತೆಗೆ ಬೈರನ್, ಕೆಮ್ಮಣ್ಣು ನಾಲೆ ಆಧುನೀಕರಣಕ್ಕೆ ಸರ್ಕಾರ ಬಜೆಟ್‌ನಲ್ಲಿ 110 ಕೋಟಿ ರೂ.ಮೀಸಲಿಟ್ಟಿದೆ. ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಯಿಂದ ಹಣ ಬಿಡುಗಡೆ ಆಗಲಿದೆ ಎಂದರು.

ಸಮಾಜ ಸೇವಕ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಪುರಸಭೆ ಸದಸ್ಯರಾದ ಎಂ.ಬಿ.ಸಚಿನ್, ಸಿದ್ದರಾಜು ಕಮಲನಾಥ್, ಮಾಜಿ ಸದಸ್ಯರಾದ ಮುನ್ಸೂರ್ ಖಾನ್, ಅಸ್ಲಾಂಪಾಷ, ಇಂತಿಯಾಜ್ ವುಲಾಖಾನ್, ಮುಖಂಡರಾದ ಶಾಂತಮ್ಮ, ರಾಜು, ಎಂ. ಡಿಮಹಾಲಿಂಗಯ್ಯ, ಸಂತೋಷಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net