ಮುಂದಿನ ಬಾರಿ ಬಿಜೆಪಿ ಗೆಲುವು ಖಚಿತ

12blh7 vijay metagud bd
Published on

ಬೈಲಹೊಂಗಲ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತಕ್ಷೇತ್ರದಲ್ಲಿ ಹೆಚ್ಚಿನ ಬೆಂಬಲ ಹೊಂದಿರುವ ಬಿಜೆಪಿ ಗೆಲುವು ನಿಶ್ಚಿತವಾಗಿದೆ ಎಂದು ಉದ್ಯಮಿ, ಬಿಜೆಪಿ ಮುಖಂಡ ವಿಜಯ ಮೆಟಗುಡ್ಡ ಹೇಳಿದರು.

ಪಟ್ಟಣದ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ತಮ್ಮ 48ನೇ ಜನ್ಮ ದಿನದ ಅಂಗವಾಗಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿ ಬಳಗ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಮಾತನಾಡಿ, ಕಳೆದ 15 ವರ್ಷಗಳಿಂದ ಅಧಿಕಾರ ಇಲ್ಲದಿದ್ದರೂ ಜನಪರ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇವೆ. ಇನಾಮದಾರ ಸಕ್ಕರೆ ಕಾರ್ಖಾನೆ ಸೇರಿ ಅನೇಕ ಉದ್ದಿಮೆ ಸ್ಥಾಪಿಸಿ 2,000 ಕ್ಕೂ ಅಧಿಕ ಜನತೆಗೆ ಉದ್ಯೋಗ ಸೃಷ್ಟಿಸಲಾಗಿದೆ ಎಂದರು.

ಬಿಜೆಪಿ ಮತಕ್ಷೇತ್ರದಲ್ಲಿ ಅತ್ಯಧಿಕ ಕಾರ್ಯಕರ್ತರು ಮತ್ತು ಮತದಾರರನ್ನು ಹೊಂದಿದೆ. ಮುಂಬರುವ ಚುನಾವಣೆಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಂಡು ಬಿಜೆಪಿ ಗೆಲ್ಲಿಸುವಲ್ಲಿ ಶ್ರಮಿಸಲಾಗುವುದು. ಜನತೆಗೆ ಹೆಚ್ಚಿನ ಉದ್ಯೋಗ ನೀಡುವ ನಿಟ್ಟಿನಲ್ಲಿ ಇನ್ನಷ್ಟು ಉದ್ದಿಮೆ ಸ್ಥಾಪಿಸುವ ಇಚ್ಛೆ ಹೊಂದಿದ್ದೇನೆ. ಜನತೆಯ ಆಶೀರ್ವಾದಕ್ಕೆ ಸದಾ ಚಿರಋಣಿಯಾಗಿ

ಪ್ರಾಮಾಣಿಕವಾಗಿ ಸೇವೆ ಮಾಡುವೆ. ಜನ್ಮ ದಿನಕ್ಕೆ ಹಾರೈಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.

ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ನಾವು ಸದಾ ಜನತೆಯ ಹಿತದೃಷ್ಟಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ರಕ್ತದಾನ ಶಿಬಿರದ ಮೂಲಕ ಇನ್ನೊಬ್ಬರ ಆರೋಗ್ಯ, ಪ್ರಾಣ ರಕ್ಷಣೆಗೆ ನೆರವಾಗುತ್ತಿದ್ದೇವೆ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ. ಅಧಿಕಾರ ಇಲ್ಲದಿದ್ದರೂ ನಮ್ಮ ಜನಸೇವೆ ಮುಂದುವರಿಯಲಿದೆ. ಜನತೆಯ ಅಭಿಮಾನಕ್ಕೆ ಸದಾ ಚಿರಋಣಿಯಾಗಿದ್ದೇವೆ ಎಂದರು.

ಸುಮಾರು 260ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು. 1,000 ಕ್ಕೂ ಅಧಿಕ ಬಾಲ ರಕ್ಷಣಾ ಕಿಟ್ ವಿತರಣೆ ಮಾಡಲಾಯಿತು. 800ಕ್ಕೂ ಅಧಿಕ ಜನರು ಉಚಿತ ವಾಹನ ಕಲಿಕಾ ಚಾಲನಾ ಅರ್ಜಿ ಸಲ್ಲಿಸಿದರು. ಸಹಸ್ರಾರು ಜನರು ಆಗಮಿಸಿ ಜನ್ಮದಿನದ ಶುಭಕೋರಿದರು.

ಹೊಸೂರ ಗಂಗಾಧರ ಸ್ವಾಮೀಜಿ, ಭಗಳಾಂಬಾ ದೇವಸ್ಥಾನದ ವೀರಯ್ಯ ಸ್ವಾಮೀಜಿ, ಡಾ.ಬಸವರಾಜ ಮಹಾಂತಶೆಟ್ಟಿ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಶಾಸಕ ವಿಶ್ವಾಸ ವೈದ್ಯ, ಇನಾಮದಾರ್ ಶುಗರ್ಸ್ ನಿರ್ದೇಶಕ ವಿಕ್ರಂ ಇನಾಮದಾರ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ, ಗುರುಪಾದ ಕಳ್ಳಿ, ಎಫ್.ಎಸ್.ಸಿದ್ದನಗೌಡರ, ಮಹಾಂತೇಶ ಮೆಟಗುಡ್ಡ, ಶಿವಾನಂದ ಬೆಳಗಾವಿ, ಮಹಾಂತೇಶ ಜಿಗಜಿನ್ನಿ, ದಯಾನಂದ ಪರಾಳಶೆಟ್ಟರ, ಲಕ್ಕಪ್ಪ ಕಾರಗಿ, ಸಂತೋಷ ಹಡಪದ, ನಾಗೇಶ ಮರಕುಂಬಿ, ಅಜ್ಜಪ್ಪ ಹೊಸೂರ, ಜಗದೀಶ ಬೂದಿಹಾಳ, ಸಂಜಯ ಮೆಟಗುಡ್ಡ, ರಾಚಪ್ಪ ಮಟ್ಟಿ, ಶಂಕರ ಚೌಡಣ್ಣವರ, ಸಂಜಯ ಕುಪ್ಪಸಗೌಡರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net