ಮುಂದಿನ ಪೀಳಿಗೆಗೆ ಬಯಲಾಟ ಪರಿಚಯಿಸಿ, ವಿದ್ಯಾರ್ಥಿಗಳಿಗೆ ಜಿಬಿಆರ್ ಕಾಲೇಜ್‌ನ ಸಿ. ಮೋಹನ್‌ರೆಡ್ಡಿ ಸಲಹೆ

290120 Hadagali Bayalata Sambrama Programme
Published on

ಹೂವಿನಹಡಗಲಿ: ಗ್ರಾಮೀಣ ಭಾಗದ ಜೀವಂತ ಹಾಗೂ ಗಟ್ಟಿ ಕಲೆಯಾದ ಬಯಲಾಟವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಜೀವಂತವಾಗಿರಿಸುವ ಅವಶ್ಯಕತೆಯಿದೆ ಎಂದು ಜಿಬಿಆರ್ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಸಿ. ಮೋಹನ್‌ರೆಡ್ಡಿ ಹೇಳಿದರು.

ಪಟ್ಟಣದ ಜಿಬಿಆರ್ ಕಾಲೇಜ್‌ನಲ್ಲಿ ಬುಧವಾರ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಜಿಲ್ಲಾ ಘಟಕ, ಕೊಂಬಳಿ ಗ್ರಾಮದ ಶ್ರೀ ಬಸವೇಶ್ವರ ಬಯಲಾಟ ಕಲಾ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಬಯಲಾಟ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಯಲಾಟದ ಸನ್ನಿವೇಶಗಳು ಇಂದಿನ ನಿಜ ಜೀವನಕ್ಕೆ ಹತ್ತಿರವಾಗಿವೆ. ಯುವ ಸಮೂಹ ಬಯಲಾಟ ಆಯೋಜಿಸಿ ಕಲೆ ಉಳಿವಿಗೆ ಶ್ರಮಿಸಬೇಕು ಎಂದರು.
ಸಾಹಿತಿ ತೋ.ಮ. ಶಂಕ್ರಯ್ಯ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಬಯಲಾಟ, ರಂಗಭೂಮಿ ಉಳಿಯಬೇಕಾದರೆ ಸರ್ಕಾರ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ಬಯಲಾಟ ಅಕಾಡೆಮಿ ಸದಸ್ಯ ಕೆ.ಎಸ್. ಸತ್ಯನಾರಾಯಣ ಮಾತನಾಡಿದರು. ಕೊಂಬಳಿ ಗ್ರಾಪಂ ಅಧ್ಯಕ್ಷ ಹುಸೇನ್‌ಸಾಬ್, ಪುರಸಭೆ ಸದಸ್ಯ ಮಂಜುನಾಥ ಜೈನ್, ಪ್ರಾಚಾರ್ಯ ವರಕುಮಾರಗೌಡ, ಉಪನ್ಯಾಸಕ ಎಸ್.ಎಸ್. ಪಾಟೀಲ್, ಬಯಲಾಟ ಅಕಾಡೆಮಿ ಸದಸ್ಯ ಡಾ. ಕೆ. ರುದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net