ದಿನಪತ್ರಿಕೆ, ಹಾಲು ವಿತರಕನ ಪತ್ನಿ ಗ್ರಾಪಂ ಅಧ್ಯಕ್ಷೆ !

Newspaper, milk distributor's wife is the president of Gram Panchyati!
ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಪಂನ ನೂತನ ಅಧ್ಯಕ್ಷರಾಗಿ ಚಂದ್ರಕಲಾ ನಾಗರಾಜ ಸತ್ಯಾಗೋಳ, ಉಪಾಧ್ಯಕ್ಷರಾಗಿ ಬಸಪ್ಪ ಚಲವಾದಿ ಅವಿರೋಧವಾಗಿ ಆಯ್ಕೆಯಾದರು. ಮಲ್ಲಿಕಾರ್ಜುನ ನಾಡಗೌಡ ಇತರರಿದ್ದರು.
Published on

ಮುದ್ದೇಬಿಹಾಳ: ಹಲವು ವರ್ಷ ಗ್ರಾಮದಲ್ಲಿ ಮನೆ ಮನೆಗಳಿಗೆ ಹಾಲು, ಕನ್ನಡ ದಿನಪತ್ರಿಕೆಗಳನ್ನು ಹಂಚಿದ್ದ ವಿತರಕರೊಬ್ಬರ ಪತ್ನಿ ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಪಂಚಾಯಿತಿ ಆಡಳಿತಕ್ಕೆ ಕಾಲಿಟ್ಟಿದ್ದಾರೆ.

ಬಸರಕೋಡ ಗ್ರಾಪಂನ ನೂತನ ಅಧ್ಯಕ್ಷೆಯಾಗಿ ಚಂದ್ರಕಲಾ ನಾಗರಾಜ ಸತ್ಯಾಗೋಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರ ಪತಿ ಬಸರಕೋಡ, ರೂಢಗಿ, ಗುಂಡಕರ್ಜಗಿ, ಸಿದ್ದಾಪುರ ಪಿ.ಟಿ ಮೊದಲಾದ ಸುತ್ತಮುತ್ತಲಿನ ಗ್ರಾಮಗಳಿಗೆ ಹಾಲು, ಪತ್ರಿಕೆ ಸರಬರಾಜು ಮಾಡಿ ಜನರ ಪ್ರೀತಿ ಗಳಿಸಿದ್ದರು. ಇದೀಗ ಅವರ ಪತ್ನಿಗೆ ಬಸರಕೋಡ ಗ್ರಾಪಂ ಅಧ್ಯಕ್ಷ ಗಾದಿ ಸಲೀಸಾಗಿ ದೊರೆತಿದೆ.

ಈ ಕುರಿತು ಮಾತನಾಡಿದ ನೂತನ ಗ್ರಾಪಂ ಅಧ್ಯಕ್ಷ ಚಂದ್ರಕಲಾ ಸತ್ಯಾಗೋಳ, ಈ ಎಲ್ಲ ಬೆಳವಣಿಗೆಗೆ ನಮ್ಮ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರೇ ಕಾರಣ ಎಂದು ಹೇಳಿದರು.

ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ನಾಡಗೌಡ ಮಾತನಾಡಿ, ಕಾಂಗ್ರೆಸ್ ಬೆಂಬಲಿಗರಾಗಿರುವ ಸತ್ಯಾಗೋಳ ಅವರಿಗೆ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಆಡಳಿತ ಬಣದ ಸದಸ್ಯರು ಒಮ್ಮತ ಸೂಚಿಸಿದ್ದು ಅವರನ್ನೇ ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.

ಉಪಾಧ್ಯಕ್ಷರಾಗಿ ಬಸಪ್ಪ ಚಲವಾದಿ ಅವರನ್ನು ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಎಸ್.ಎ.ಜಮಾದಾರ ಕಾರ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net