ಪತ್ರಿಕಾ ವಿತರಕರು ಸಂಘಟಿಕರಾಗಲಿ: ಸಂಘಟನಾ ಕಾರ್ಯದರ್ಶಿ ವಾಸುದೇವ್ ಸಲಹೆ

Newspaper distributors meeting Mandya
Published on

ಮಂಡ್ಯ: ದಿನನಿತ್ಯ ಮನೆ ಮನೆಗೆ ಪತ್ರಿಕೆ ಹಂಚುವ ವಿತರರಿಕರು ಮೊದಲು ಸಂಘಟಿತರಾಗುವಂತೆ ರಾಜ್ಯ ಪತ್ರಿಕಾ ವಿತರಕ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ನಾದನೂರು ವಾಸುದೇವ್ ಸಲಹೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಪತ್ರಿಕಾ ವಿತರಕರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪತ್ರಿಕಾ ವಿತರಕರಿಗೆ ಸರ್ಕಾರದಿಂದ ಹಲವು ಸೌಲಭ್ಯ ಸಿಗುತ್ತಿದೆ. ಅವುಗಳನ್ನು ಸದ್ಭಳಕೆ ಮಾಡಿಕೊಳ್ಳಲು ನಾವು ಮುಂದಾಗಬೇಕಿದೆ. ಇದಕ್ಕಾಗಿ ಪತ್ರಿಕಾ ವಿತರಕರು ಒಗ್ಗಟ್ಟಾಗಿ ಸಂಘಟಿತರಾಗಬೇಕಿದೆ. ಹಾಗಾಗಿ ಜಿಲ್ಲೆಯಲ್ಲಿರುವ ಎಲ್ಲ ಪತ್ರಿಕಾ ವಿತರಕರನ್ನು ಮೊದಲು ಇ ಶ್ರಮ್ ಪೋರ್ಟಲ್‌ನಲ್ಲಿ ಪತ್ರಿಕಾ ವಿತರಕರ ಅಡಿಯಲ್ಲಿ ನೋಂದಣಿ ಮಾಡಿಸಿಬೇಕಿದೆ. ಈ ಕೆಲಸ ಶೀಘ್ರವಾಗಿ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲೆಯ ಪತ್ರಿಕಾ ವಿತರಕರಾದ ಸಂತೋಷ್, ಸುಂದರ್‌ರಾಜು, ಗಿರೀಶ್, ಕೆಂಪಣ್ಣ, ರಾಘು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net