

ಚಿತ್ರದುರ್ಗ: ಪತ್ರಿಕಾ ವಿತರಕರು ರಿಯಲ್ ಹೀರೋಗಳು ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಬಣ್ಣಿಸಿದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಜಿಲ್ಲಾ ಕಾರ್ಯನಿರತ ಪತ್ರಿಕಾ ಹಂಚಿಕೆದಾರರ ಮತ್ತು ವಿತರಕರ ಸಂಘದಿಂದ ಪತ್ರಿಕಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಮ್ಮ ಸಮಸ್ಯೆ ತಿಳಿಯಲು ಈ ದಿನಾಚರಣೆ ಸಹಕಾರಿ ಆಗಿದ್ದು, ಹಕ್ಕುಪತ್ರ ವಿಚಾರವಾಗಿ ಚರ್ಚಿಸಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೃತ್ತಿಯಲ್ಲಿ ತೊಡಗಿದ್ದ ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ್ದು ವಿಶೇಷ. ನನ್ನ ತಾತ, ತಂದೆ ಕೂಡ ಈ ಕಾಯಕ ಮಾಡಿದ್ದಾರೆ. ನನಗೆ ಆ ಭಾಗ್ಯ ಸಿಗಲಿಲ್ಲ ಎಂದರು.
ಸನ್ಮಾನಿತರು: ಚಿತ್ರದುರ್ಗ ನಗರ ಪತ್ರಿಕಾ ವಿತರಕರಾದ ಆರ್.ಮೋಹನ್‌ಕುಮಾರ್, ಮಂಜುನಾಥ್ ನಾಯ್ಡು, ಆರ್.ಪ್ರಶಾಂತ್, ಸುನೀಲ್, ಕರಿಬಸಪ್ಪ, ದುಗ್ಗಪ್ಪ, ನಾಗರಾಜ್ ಶೆಟ್ಟಿ, ತಾಲೂಕು ಭಾಗದ ನಾಗಣ್ಣ, ತೋಂಟದಾರ್ಯ, ಗಿರೀಶ್, ನಾಗರಾಜ್, ಓಂಕಾರಪ್ಪ, ಮಲ್ಲಿಕಾರ್ಜುನ್ ಅವರನ್ನು ಗಣ್ಯರು ಸನ್ಮಾನಿಸಲಾಯಿತು.