ಟಿಪ್ಪರ್ ಡಿಕ್ಕಿ ಹೊಡೆದು ಪತ್ರಿಕಾ ವಿತರಕ ಸಾವು

Crime Logo
Published on

ಮೈಸೂರು: ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದಿದ್ದರಿಂದ ಪತ್ರಿಕಾ ವಿತರಕ ಉದಯಗಿರಿ ನಿವಾಸಿ ಮಂಜುನಾಥ್ (38) ಮೃತಪಟ್ಟಿದ್ದಾರೆ. ನಗರದ ಮಣಿಪಾಲ್ ಆಸ್ಪತ್ರೆ ಬಳಿ ರಿಂಗ್ ರಸ್ತೆಯಲ್ಲಿ ಶುಕ್ರವಾರ ಸಂಜೆ, ರಾಯಲ್ ಇನ್ ಜಂಕ್ಷನ್‌ನಿಂದ ಮಣಿಪಾಲ್ ಆಸ್ಪತ್ರೆ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದಾಗ ಅದೇ ಮಾರ್ಗವಾಗಿ ಹಿಂದಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಪತ್ನಿ ನೀಡಿದ ದೂರಿನ ದೂರಿನ ಮೇರೆಗೆ ಎನ್.ಆರ್.ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net