ಪತ್ರಿಕೆ ವಿತರಣೆ ಕಾರ್ಯ ಶ್ರೇಷ್ಠವಾದದು

30-msk-3
Published on

ಮಸ್ಕಿ: ಮಳೆ, ಗಾಳಿ ಸೇರಿ ಯಾವುದೇ ಸನ್ನಿವೇಶದಲ್ಲೂ ನಾವು ಎದ್ದೇಳುವುದಕ್ಕಿಂತ ಮುಂಚೆ ಮನೆಗೆ ಪತ್ರಿಕೆ ವಿತರಿಸುವ ಕಾರ್ಯ ಅತ್ಯಂತ ಶ್ರೇಷ್ಠವಾದದು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಲಕ್ಷ್ಮೀನಾರಾಯಣ ಶ್ರೇಷ್ಠಿ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ವಿತರಕರಿಗೆ ಸ್ವೆಟರ್ ವಿತರಿಸಿ ಮಾತನಾಡಿದರು. ಲಯನ್ಸ್ ಕ್ಲಬ್ ಹಿರಿಯ ಸದಸ್ಯ ಡಾ.ಬಿ.ಎಚ್.ದಿವಟರ್ ಮಾತನಾಡಿ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ವಿದ್ಯಾರ್ಥಿ ದಿನಗಳಲ್ಲಿ ಪೇಪರ್ ಹಾಕುವ ಮೂಲಕ ಸಣ್ಣ ಪ್ರಮಾಣದ ಹಣ ಗಳಿಸಿ ವಿದ್ಯಾಭ್ಯಾಸಕ್ಕೆ ಬೇಕಾದ ಉಪಕರಣ ಖರೀದಿಸುತ್ತಿದ್ದರು. ಈ ಮೂಲಕ ಮುಂದೆ ಕಲಾಂ ದೇಶದ ಬಹುದೊಡ್ಡ ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ಭಾರತದ ಗೌರವ ಹೆಚ್ಚಿಸಿದರು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ವೀರೇಶ ಸೌದ್ರಿ ಲಯನ್ಸ್ ಕ್ಲಬ್ ಕಾರ್ಯ ಶ್ಲಾಘಿಸಿದರು. ಹಿರಿಯ ಪತ್ರಕರ್ತ ಅಬ್ದುಲ್ ಅಜೀಜ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಶಿವಪ್ರಸಾದ ಕ್ಯಾತ್ನಟ್ಟಿ, ಡಾ.ಮಲ್ಲಿಕಾರ್ಜುನ ಶೆಟ್ಟಿ, ಬಸವಲಿಂಗ ಶೆಟ್ಟಿ, ಆದಯ್ಯಸ್ವಾಮಿ ಕ್ಯಾತ್ನಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net