

ಚಿಕ್ಕಮಗಳೂರು: ಸುದ್ದಿ ಮಾಡುವುದು ಸುಲಭೆ. ಆದರೆ ಸುದ್ದಿಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಾಗ ಆ ಪತ್ರಿಕೆಗಳನ್ನು ಸಾರ್ವಜನಿಕರಿಗೆ ತಲುಪಿಸುವುದು ಕಷ್ಟಕರ. ಹೀಗಾಗಿ ಯಾರು ಬೇಕಾದರೂ ಸುದ್ದಿ ಮಾಡಬಹುದು. ಆದರೆ ಎಲ್ಲರೂ ಪತ್ರಿಕೆಗಳನ್ನು ಹಂಚಲು ಸಾಧ್ಯವಿಲ್ಲ ಎಂದು ಮಾಹಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.
ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮAದಿರದಲ್ಲಿ ಎಎಸ್‌ಎನ್ ಕ್ರಿಯೇಷಿಯನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨ ದಿನಗಳ ನೃತ್ಯ ,ಕಿರುಚಿತ್ರ, ಪ್ಯಾಷನ್ ಶೋ ಕಾರ್ಯ ಕ್ರಮದಲ್ಲಿ ಮೂಡಿಗೆರೆಯ ಪತ್ರಿಕಾ ವಿತರಕ ಮೊಹಮ್ಮದ್ ಜಾಹೀರ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಕಳೆದ ಐವತ್ತು ವರ್ಷಗಳಿಂದ ಗಾಳಿ, ಮಳೆ ಎನ್ನದೆ ಪತ್ರಿಕೆಗಳ ಏಜೆನ್ಸಿಯನ್ನು ನಡೆಸಿಕೊಂಡು ಮನೆಮನೆಗೆ ತಲುಪಿಸುತ್ತಿರುವ ಕಾಯಕ ಮಾಡುತ್ತಿರುವ ಮಹಮ್ಮದ್ ಜಾಹೀರ್ ಅಪರೂಪದ ವ್ಯಕ್ತಿ ಎಂದರು.
ಇಂತಹ ಕಾರ್ಯಕ್ರಮದಲ್ಲಿ ಸೈನಿಕರನ್ನು ನೆನಪಿಸಿಕೊಂಡು ಮೂವರು ಸೈನಿಕರನ್ನು ಕರೆದು ಅವರ ಪಾದ ಪೂಜೆ ಮಾಡಿ, ಸನ್ಮಾನಿಸಿ ಅಭಿನಂದಿಸಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ದೇಶದ ಗಡಿ ಕಾಯುವ ಯೋದರ ಬಗ್ಗೆ ಮತ್ತು ಅವರ ಕಾರ್ಯದ ಬಗ್ಗೆ ತಿಳಿಸುವುದರ ಮೂಲಕ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿರುವ ಕ್ರಿಯೇಷನ್ ಮುಖ್ಯಸ್ಥರ ಕಾರ್ಯ ಅಭಿನಂದನಾರ್ಹ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ರಿಯೇಷನ್ ಮುಖ್ಯಸ್ಥರಾದ ಅಜಿತ್ ಕೆವಿಯರ್, ನವ್ಯಶ್ರೀ ಕೆವಿಯರ್, ಅಗ್ರಿಮಾರ್ಟ್ ಗಜೇಶ್ ಮತ್ತಿತರರಿದ್ದರು.