

ಹಾಸನ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ವಾಹನ ಚಾಲಕರಾಗಿ 26 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಎಚ್.ಎಸ್. ನಾಗರಾಜ್ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.
ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಮ್ಮ ಮಾತನಾಡಿ, ವೃತ್ತಿಯಲ್ಲಿ ವಯೋನಿವೃತ್ತಿ ಸಹಜ. ಆದರೆ, ಜೀವನದ ಉತ್ಸಾಹದಲ್ಲಿ ನಿವೃತ್ತಿ ತೆಗೆದುಕೊಳ್ಳಬಾರದು ಎಂದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ನಾಗರಾಜು, 26 ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ನೀಡಿದ ಇಲಾಖೆಗೆ ಧನ್ಯವಾದ ತಿಳಿಸಿದರಲ್ಲದೆ, ಕರ್ತವ್ಯದ ಸಂದರ್ಭದಲ್ಲಿದ್ದ ಎಲ್ಲ ವಾರ್ತಾಧಿಕಾರಿಗಳನ್ನು ಸ್ಮರಿಸಿದರು.
ಇಲಾಖೆ ನಿವೃತ್ತ ಸೂಪರಿಂಟೆಂಡೆಂಟ್ ಎಂ.ಎ.ಸುಬ್ಬೇಗೌಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೇಣು ಕುಮಾರ್, ಎನ್.ನಂಜುಂಡೇಗೌಡ, ರಂಗಸ್ವಾಮಿ, ಮಂಜುನಾಥ್, ಕರಿಯಪ್ಪ, ವೆಂಕಟೇಶ್, ಪ್ರಥಮ ದರ್ಜೆ ಸಹಾಯಕ ರವೀಂದ್ರ, ಕಲಾವಿದ ಬಿ.ಟಿ.ಮಾನವ, ಸಿಬ್ಬಂದಿ ಪ್ರಸಾದ್, ಸುರೇಶ್, ಪವನ್ ಕುಮಾರ್, ಅಂಬಿಕಾ ಇತರರಿದ್ದರು.