ಕಸದ ರಾಶಿಯಲ್ಲಿ ಬಿದ್ದಿದ್ದ ನವಜಾತಶಿಶು ರಕ್ಷಣೆ

22 05 2025_BGR RURAL_PAGE_5A
ಮಾದನಾಯಕನಹಳ್ಳಿ ಅರ್ಕಾವತಿ ನದಿ ದಡದ ಕಸದ ರಾಶಿಯಲ್ಲಿ ಬಿದಿದ್ದ ಮಗುವನ್ನು ರಕ್ಷಣೆ ಮಾಡಿರುವ ಪೊಲೀಸರು.
Published on

ನೆಲಮಂಗಲ: ಬೆಂಗಳೂರು&ತುಮಕೂರು ರಾ.ಹೆದ್ದಾರಿ 48ರ ಮಾದನಾಯಕನಹಳ್ಳಿ ಬಳಿಯ ಅರ್ಕಾವತಿ ನದಿ ದಡದ ಕಸದ ರಾಶಿ ಮೇಲೆ ಎರಡು ದಿನದ ನವಜಾತ ಶಿಶು ಬುಧವಾರ ಪತ್ತೆಯಾಗಿದೆ. ಮಗು ಅಳುವುದನ್ನು ಗಮನಿಸಿದ ಲಾರಿ ಚಾಲಕ ಮಾದನಾಯಕನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರಕ್ಷಕ ನಿರೀಕ್ಷಕ ಮುರಳಿ ನೇತೃತ್ವದ ತಂಡ ಮಗುವನ್ನು ರಸಿದ್ದು, ನಗರೂರಿನ ಬಿಜಿಎಸ್​ ಆಸ್ಪತ್ರೆಗೆ ದಾಖಲಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಗುವನ್ನು ಹಸ್ತಾಂತರ ಮಾಡಲಾಗಿದೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಿಯ ಆಸ್ಪತ್ರೆ ಹಾಗೂ ಸ್ಥಳದಲ್ಲೇ ಇರುವ ಕೆಲ ಗೋದಾಮು, ಮಳಿಗೆಗಳ ಸಿಸಿ ಕ್ಯಾಮರಾ ಪರಿಶೀಲನೆ ಮಾಡುತ್ತಿದ್ದು, ನವಜಾತ ಶಿಶು ಎಸೆದು ಹೋದವರ ಪತ್ತೆ ಕಾರ್ಯ ಚುರುಕುಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net