ಹಳ್ಳದಲ್ಲಿ ಎಸೆದಿದ್ದ ನವಜಾತ ಹೆಣ್ಣು ಶಿಶುವಿನ ರಕ್ಷಣೆ

mgd
Published on

ಮಾಗಡಿ: ತಾಲೂಕಿನ ಸೋಲೂರು ಹೋಬಳಿ ಹೊನ್ನಯ್ಯನಪಾಳ್ಯದ ಜಮೀನೊಂದರ ಹಳ್ಳದಲ್ಲಿ ಎಸೆಯಲಾಗಿದ್ದ ನವಜಾತ ಹೆಣ್ಣು ಶಿಶುವನ್ನು ಸೋಮವಾರ ರಸಲಾಗಿದೆ.

ಜಮೀನು ಮಾಲೀಕ ನಾಗರಾಜು ಸೋಮವಾರ ಬೆಳಗ್ಗೆ ತೋಟಕ್ಕೆ ಹೋದಾಗ ಹಳ್ಳದ ಕಡೆಯಿಂದ ಮಗು ಅಳುವ ಸದ್ದು ಕೇಳಿ, ಸ್ಥಳಕ್ಕೆ ಹೋದಾಗ, ಶಿಶುವಿನ ಮೇಲೆ ನಾಯಿಗಳು ದಾಳಿ ಮಾಡಲು ಯತ್ನಿಸಿದ್ದವು. ಕೂಡಲೇ ಮಗುವನ್ನು ರಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರೊಂದಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಂದ್ರ ಹಾಗೂ ಅಂಗನವಾಡಿ ಕಾರ್ಯಕರ್ತರು ಹೆಣ್ಣುಮಗುವನ್ನು ಪಡೆದು, ಸೋಲೂರು ಆರೋಗ್ಯ ಕೇಂದ್ರ ಹಾಗೂ ಮಾಗಡಿ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿಗಳು ದೃಢಪಡಿಸಿದ್ದು, ಮಗುವನ್ನು ತಾತ್ಕಾಲಿಕ ರಕ್ಷಣೆ, -ಪೋಷಣೆಗಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಟೌನಿನ ಬಿಳಗುಂಬ ರಸ್ತೆಯ ಸಂಜೀವಿನಿ ಗಾರ್ಡನ್​ನ ಸರ್ಕಾರಿ ದತ್ತು ಸಂಸ್ಥೆಯ ಬಾಲಕಿಯರ ಬಾಲಮಂದಿರಕ್ಕೆ ದಾಖಲಿಸಲಾಗಿದೆ. ಕಾರಿನಲ್ಲಿ ಬಂದು ಮಗುವನ್ನು ಎಸೆದು ಹೋಗಿರಬಹುದು ಎಂದು ಶಂಕಿಸಲಾಗಿದ್ದು, ಈ ಸಂಬಂಧ ಕುದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವಜಾತ ಹೆಣ್ಣು ಶಿಶು ಆರೋಗ್ಯದಿಂದಿದ್ದು ಇಂತಹ ಮಗುವನ್ನು ಅಜ್ಞಾತ ಸ್ಥಳದಲ್ಲಿ ಬಿಟ್ಟುಹೋಗುವ ಬದಲು ನಮ್ಮ ಇಲಾಖೆಗೆ ಮಾಹಿತಿ ನೀಡಿ, ಸರ್ಕಾರದ ವಶಕ್ಕೆ ನವಜಾತ ಶಿಶುಗಳನ್ನು ನೀಡಿದರೆ, ಪಾಲಕರ ಹೆಸರಿನ ಗೌಪ್ಯತೆ ಕಾಪಾಡಲಾಗುವುದು. > ಸುರೇಂದ್ರ ಸಿಡಿಪಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net