ಬಳ್ಳಾರಿ : ನಗರದ ಹೊರವಲಯದ ಹೊಸಪೇಟೆ - ಬೆಂಗಳೂರು ಬೈಪಾಸ್ ರಸ್ತೆ ಬಳಿ ಜೀವಂತವಾಗಿರುವ ಹೆಣ್ಣು ನವಜಾತ ಶಿಶು ಪತ್ತೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತೋರಣಗಲ್ ನಿವಾಸಿಗಳಾದ ಯಶೋಧ, ಲಕ್ಷ್ಮೀ ಎಂಬವವರು ಬೈಪಾಸ್ ರಸ್ತೆ ಬಳಿ ಕಾಯಿಪಲ್ಯೆ ಮಾರಾಟದ ವೇಳೆ ಜು 12 ರಂದು ಶಿಶು ಪತ್ತೆಯಾಗಿದೆ. ಆ ದಿನದಂದೇ ಚಿಕಿತ್ಸೆಗಾಗಿ ಬಿಮ್ಸ್‌ಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಜು 14 ರಂದು ಮೃತಪಟ್ಟಿದೆ. ನವಜಾತ ಹೆಣ್ಣು ಶಿಶುವಿನ ಜನನವನ್ನು ಮರೆಮಾಚುವ ಉದ್ದೇಶದಿಂದ ರಸ್ತೆ ಬಳಿ ಬಿಟ್ಟು ಹೋದ ಪೋಷಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂಬುದಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ ದೂರು ದಾಖಲಿಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
==