ಚರಂಡಿ ಬಳಿ ನವಜಾತ ಶಿಶು ಪತ್ತೆ

IMG-20230719-WA0023
Published on

ಧಾರವಾಡ: ನಗರದ ರೌಣಕಪುರ ಉರ್ದು ಶಾಲೆ ಬಳಿಯ ಚರಂಡಿ ಪಕ್ಕ ನವಜಾತ ಗಂಡು ಶಿಶು ಪತ್ತೆಯಾಗಿದೆ. ಮಂಗಳವಾರ ಸಂಜೆ ಯಾರೋ ಹಸುಗೂಸನ್ನು ಸುರಿಯು ಮಳೆಯಲ್ಲೇ ಚರಂಡಿ ಪಕ್ಕದಲ್ಲಿ ಬಿಟ್ಟು ಹೋಗಿದ್ದಾರೆ. ಅದೃಷ್ಟವಶಾತ್ ಶಿಶು ಬೀದಿನಾಯಿಗಳ ಕಣ್ಣಿಗೆ ಬಿದ್ದಿಲ್ಲ. ಅಲ್ಲೇ ಹಾದುಹೋಗುತ್ತಿದ್ದ ಶಾಲೆಯ ಮಕ್ಕಳು ಶಿಶುವನ್ನು ನೋಡಿ ಸಾರ್ವಜನಿಕರಿಗೆ ತಿಳಿಸಿದ್ದಾರೆ. ಜನ ಕೂಸನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿಶುವಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯವಂತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net