

ಸುಳ್ಯ: ಕರ್ನಾಟಕ ಮತ್ತು ಕೇರಳ ಗಡಿಭಾಗದಲ್ಲಿರುವ ಪಂಜಿಕಲ್ಲು ಶಾಲೆಯ ಜಗಲಿಯಲ್ಲಿ ನವಜಾತ ಶಿಶುವೊಂದನ್ನು ಬಿಟ್ಟು ಹೋಗಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಶಾಲಾ ಬಳಿಯ ಮನೆಯವರು ಮಗು ಅಳುವ ಶಬ್ದ ಕೇಳಿ ನೋಡಿದಾಗ ಮಗು ಪತ್ತೆಯಾಗಿದೆ. ಬಳಿಕ ವಿಷಯ ಪೊಲೀಸರಿಗೆ ತಿಳಿಸಲಾಯಿತು. ಮಗು ಪತ್ತೆಯಾದ ಸ್ಥಳ ಆದೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಕಾರಣ ಮಗುವನ್ನು ಆದೂರು ಪೊಲೀಸರ ಸುಪರ್ದಿಗೆ ಒಪ್ಪಿಸಲಾಗಿದ್ದು ತನಿಖೆ ನಡೆಯುತ್ತಿದೆ.