

ಮುಧೋಳ: ತಾಲೂಕಿನ ಹಲಗಲಿ-ಮೆಳ್ಳಿಗೇರಿ ನಡುವಿನ ಮುಳ್ಳುಕಂಟಿಯಲ್ಲಿ ನವಜಾತ ಶಿಶುವೊಂದು ಗುರುವಾರ ತಡರಾತ್ರಿ ಪತ್ತೆಯಾಗಿದೆ.
ಎರಡು ದಿನದ ಹೆಣ್ಣುಮಗು ಎರಡು ಕೆಜಿ ತೂಕ ಹೊಂದಿದ್ದು, ಸಣ್ಣ-ಪುಟ್ಟ ತರಚಿದ ಗಾಯಗಳಾಗಿವೆ. ಮಗು ಆರೋಗ್ಯವಾಗಿದೆ ಎಂದು ಚಿಕಿತ್ಸೆ ನೀಡಿದ ವೈದ್ಯರು ಮಾಹಿತಿ ನೀಡಿದ್ದಾರೆ.
ಗುರುವಾರ ಮುಂಜಾನೆಯಿಂದ ತಡರಾತ್ರಿಯ ನಡುವಿನ ಸಮಯದಲ್ಲಿ ಬಿಟ್ಟು ಹೋಗಿದ್ದಾರೆ. ಹಲಗಲಿ ಗ್ರಾಮದ ಹೊರವಲಯದಲ್ಲಿನ ಯಲ್ಲಮ್ಮದೇವಿ ದೇವಸ್ಥಾನದ ಸಮೀಪದಲ್ಲಿ ಅಳುವ ಧ್ವನಿ ಕೇಳಿಸಿದೆ. ತಕ್ಷಣ ಗ್ರಾಮಸ್ಥರು ಮುಳ್ಳುಕಂಟಿಯಲ್ಲಿದ್ದ ಮಗುವನ್ನು ಸಮೀಪದ ಹಲಗಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.