

ಕೊಪ್ಪಳ: ನಗರದ ಬೆಂಕಿ ನಗರದ ಚರಂಡಿಯಲ್ಲಿ ಶನಿವಾರ ನವಜಾತ ಗಂಡು ಶಿಶು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇರುವೆ ಮೆತ್ತಿಕೊಂಡ ಸ್ಥಿತಿಯಲ್ಲಿ ಮಗು ಕಂಡ ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಚರಂಡಿಗೆ ಬಿಸಾಕಿದವರು ಯಾರೆಂಬ ಬಗ್ಗೆ ಗೊತ್ತಾಗಿಲ್ಲ.
ಮದವೆಗೂ ಮುನ್ನ ಜನಿಸಿದ ಮಗುವಾಗಿರುವ ಕಾರಣ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ಶಿಶು ದೇಹ ವಶಕ್ಕೆ ಪಡೆದು ಅಂತ್ಯ ಸಂಸ್ಕಾರ ನಡೆಸಿದರು. ಘಟನೆ ಸಂಬಂಧ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.