New Year ಡಿಸೆಂಬರ್‌ 31 ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ನಿಯಮ ಜಾರಿ

New Year
Published on

ಕಾರವಾರ/ New Year:  ಡಿಸೆಂಬರ್ 31 ರಂದು ನಡೆಯುವ ಹೊಸ ವರ್ಷದ ಸಂಭ್ರಮಾಚರಣೆ ಅವಧಿಯಲ್ಲಿ ಜನ ಕಾನೂನು ಉಲ್ಲಂಘನೆ ಮಾಡದಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಎಚ್ಚರಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಿಯಮಗಳನ್ನು ಪಾಲಿಸಬೇಕು. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

New Year ಆಚರಣೆಗೆ ಈ ನಿಯಮಗಳು

ಕಡ್ಡಾಯವಾಗಿ ಧ್ವನಿವರ್ಧಕಗಳನ್ನು ಬಳಸಬಾರದು. ಸಾರ್ವಜನಿಕ ಸ್ಥಳದಲ್ಲಿ ಮೋಟಾರ್ ವೀಲಿಂಗ್ ನಡೆಸಬಾರದು. ನಿಗದಿಪಡಿಸಿದ ಪಾರ್ಕಿಂಗ್ ಸ್ಥಳದಲ್ಲಿಯೇ ವಾಹನಗಳನ್ನು ಶಿಸ್ತುಭದ್ದವಾಗಿ ನಿಲ್ಲಿಸಬೇಕು. ಮಧ್ಯಪಾನ ಸೇವಿಸಿ ಮೈಮರೆತು ಸಮುದ್ರ ನೀರಿಗೆ, ಜಲಪಾತ ಹಾಗೂ ನದಿಗಳ ನೀರಿನಲ್ಲಿ ಇಳಿಯಬಾರದು.

ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವುದು, ತೊಂದರೆ ಕೊಡುವ ಘಟನೆಗಳು ನಡೆಯಬಾರದು. ಸಾಯಂಕಾಲ 6 ಗಂಟೆಯ ನಂತರ ಯಾವುದೇ ಕಾರಣಕ್ಕೂ ಕಡಲ ತೀರಗಳಲ್ಲಿ ಬೋಟಿಂಗ್ ನಡೆಸತಕ್ಕದ್ದಲ್ಲ.

ಎಲ್ಲ ಬಾರ್, ರೆಸ್ಟೋರೆಂಟ್, ಹೋಮ್ ಸ್ಟೇ ಗಳನ್ನು ಅಬಕಾರಿ ಕಾಯ್ದೆಯಲ್ಲಿ ನಿಗದಿಪಡಿಸಿದ ಸಮಯದ ಒಳಗೆ ಮುಚ್ಚಬೇಕು. ಬೀಚ್‌ಗಳಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಘಟನೆಗಳು ನಡೆದಲ್ಲಿ ಅಂತಹವರ ಮೇಲೆ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು ಎಂದು

ಹೊಸ ವರ್ಷಕ್ಕೆ New Year ಮುರ್ಡೇಶ್ವರ ತೀರ ಓಪನ್

ಕಳೆದ 20 ದಿನಗಳಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿರುವ ಮುರ್ಡೇಶ್ವರ ಕಡಲ ತೀರವನ್ನು ಹೊಸ ವರ್ಷಾಚರಣೆಗೆ ಸಾರ್ವಜನಿಕರಿಗೆ ಮುಕ್ತವಾಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ  ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅನಧಿಕೃತವಾಗಿರುವ ಅಂಗಡಿಗಳನ್ನು ತೆರವು ಮಾಡಲಾಗಿದೆ. ಸ್ವಿಮ್ಮಿಂಗ್ ಜೋನ್ ಗುರುತಿಸಿ, ರೋಪ್ ಅಳವಡಿಕೆ ಕಾರ್ಯ ನಡೆದಿದೆ.

ಸೂಕ್ತ ಪೊಲೀಸ್, ಕರಾವಳಿ ಕಾವಲುಪಡೆ ಸಿಬ್ಬಂದಿ ನೇಮಿಸುವ ಕಾರ್ಯ ನಡೆಯಬೇಕಿದೆ ಎಂದರು. ಲೈಫ್ ಗಾರ್ಡ್ಗಳಿಗೆ ಅಗತ್ಯ ಸಾಮಗ್ರಿಗಳನ್ನು ಸ್ಥಳೀಯ ಜಲಸಾಹಸ ಚಟುವಟಿಕೆ ನಡೆಸುವವರಿಗೆ ತಾತ್ಕಾಲಿಕವಾಗಿ ಒದಗಿಸಲು ಸೂಚಿಸಲಾಗಿದೆ. ಬಾಕಿ ಸಾಮಗ್ರಿಗಳನ್ನು ಒದಗಿಸುವ ಟೆಂಡರ್ ಪ್ರಕ್ರಿಯೆ ನಡೆದಿದೆ. ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಹೊಸ ವರ್ಷಾಚರಣೆಯ ಪ್ರಯುಕ್ತ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ಯಾವುದೇ ರೀತಿಯ ಅನುಚಿತ ವರ್ತನೆಯನ್ನು ತೋರಿಸದೇ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಕೆ.ಲಕ್ಷ್ಮೀಪ್ರಿಯಾ ಜಿಲ್ಲಾಧಿಕಾರಿ, ಉತ್ತರ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net