ಶನಿಯು ಸ್ವಕ್ಷೇತ್ರನಾಗಿದ್ದು, ಹೆಚ್ಚಿನ ತಾಪ ನೀಡದಿದ್ದರೂ, ನಿಮ್ಮಿಷ್ಟದಂತೆ ಕೆಲಸ ಸಾಗುವುದಿಲ್ಲ. ಮನುಷ್ಯನಿಗೆ ಮಹದೌಷಧವೆಂದರೆ ನಿಧಾನ, ಪ್ರೀತಿ, ತ್ಯಾಗ. ಈ ಬುದ್ಧಿಯಿಂದ ಅಪಾಯಗಳನ್ನು ಉಪಾಯದಿಂದ ದಾಟಿ ಜೀವನವನ್ನು ಸರಿಪಡಿಸಿಕೊಳ್ಳಬೇಕು. ಮೀನ ರಾಶಿಯಲ್ಲಿ ರಾಹು ಇರುವುದರಿಂದ ಮಡದಿ, ಮಕ್ಕಳೊಂದಿಗೆ ಜಗಳವಾಡದೆ, ಯಾರನ್ನೂ ನಿಷ್ಠುರಪಡಿಸದೆ, ಈ ಸಮಯದಲ್ಲಿ ದೈವಪ್ರಾರ್ಥನೆಗೆ ಆದ್ಯತೆ ನೀಡಿ. ಕುಲದೇವರ ಜತೆ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯನ್ನು ಪೂಜಿಸಿ.