ಹೊಸ ವರ್ಷಕ್ಕೆ ಚರ್ಚುಗಳಲ್ಲಿ ಪವಿತ್ರಪೂಜೆ

udp-31-church
Published on

ಉಡುಪಿ: ಜಿಲ್ಲೆಯ ಕೆಸ್ತ ಭಾಂಧವರು ನೂತನ ವರ್ಷ 2024 ಅನ್ನು ಪ್ರಾರ್ಥನೆಯೊಂದಿಗೆ ಸ್ವಾಗತಿಸಿದರು. ಉಡುಪಿ ಧರ್ಮಪ್ರಾಂತ್ಯದ ಧಮಾರ್ಧ್ಯಕ್ಷ ಡಾ. ಜೆರಾಲ್ಡ್​ ಐಸಾಕ್​ ಲೋಬೊ ಕಲ್ಯಾಣಪುರ ಮಿಲಾಗ್ರಿಸ್​ ಕ್ಯಾಥೆಡ್ರಲ್​ ನಲ್ಲಿ ಭಾನುವಾರ ರಾತ್ರಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು.

ನೂತನ ವರ್ಷದಲ್ಲಿ ದೇವರು ತೋರಿದ ಹಾದಿಯಲ್ಲಿ ನಡೆದು ವಿಶ್ವ ಶಾಂತಿಗಾಗಿ ಪ್ರತಿಯೊಬ್ಬರು ಪ್ರಾರ್ಥನೆ ಸಲ್ಲಿಸುವಂತೆ ಸಲಹೆ ನೀಡಿದರು.

ಮಿಲಾಗ್ರಿಸ್​ ಕ್ಯಾಥೆಡ್ರಲ್​ ನ ಪ್ರಧಾನ ಧರ್ಮಗುರು ವಲೇರಿಯನ್​ ಮೆಂಡೊನ್ಸಾ, ಸಹಾಯಕ ಧರ್ಮಗುರು ಜೋಯ್​ ಅಂದ್ರಾದೆ, ಅತಿಥಿ ಧರ್ಮಗುರು ಹೆಕ್ಟೆರ್​ ಡಿಸೋಜಾ, ನಿತೇಶ್​ ಡಿಸೋಜಾ, ರೋನ್ಸನ್​ ಡಿಸೋಜಾ ಉಪಸ್ಥಿತರಿದ್ದರು.

ಜಿಲ್ಲೆಯ ಪ್ರಮುಖದ ಚರ್ಚುಗಳಾದ ಶಿರ್ವ ಆರೋಗ್ಯ ಮಾತೆಯ ದೇವಾಲಯದಲ್ಲಿ ಧರ್ಮಗುರು ಡಾ. ಲೆಸ್ಲಿ ಡಿ'ಸೋಜಾ, ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಧರ್ಮಗುರು ಚಾರ್ಲ್ಸ್​ ಮಿನೇಜಸ್​, ಕುಂದಾಪುರ ಹೋಲಿ ರೋಸರಿ ಚರ್ಚಿನಲ್ಲಿ ಸ್ಟ್ಯಾನಿ ತಾವ್ರೊ, ಕಾರ್ಕಳ ಅತ್ತೂರು ಸಂತ ಲಾರೆನ್ಸ್​ ಬಾಸಿಲಿಕಾದಲ್ಲಿ ಆಲ್ಬನ್​ ಡಿಸೋಜಾ, ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಡೆನಿಸ್​ ಡೆಸಾ ನೇತೃತ್ವದಲ್ಲಿ ಹೊಸ ವರ್ಷ ಆಚರಣೆಯ ಪ್ರಯುಕ್ತ ಬಲಿಪೂಜೆಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net