

ಕಾರವಾರ:ಅಂಚೆ ಇಲಾಖೆಯ ನವೀಕರಿತ ತಂತ್ರಜ್ಞಾನವಾದ ಎಟಿಪಿ 2.0 ಅನ್ನು ಕಾರವಾರ ವಿಭಾಗದ ಕುಮಟಾ,
ಹೊನ್ನಾವರ ಹಾಗೂ ಭಟ್ಕಳ ತಾಲ್ಲೂಕಿನ ವಿವಿಧ ಅಂಚೆ ಕಚೇರಿಗಳಲ್ಲಿ ಶನಿವಾರದಿಂದ ಕಾರ್ಯರೂಪಕ್ಕೆ ತರಲಾಗಿದೆ. ತಂತ್ರಜ್ಞಾನ ಆಧಾರಿತ ಸೇವೆಗಳ ಮೂಲಕ
ಗ್ರಾಮೀಣ ಮತ್ತು ಶಾಖಾ ಅಂಚೆ ಕಚೇರಿಗಳಲ್ಲಿ ವೇಗ ಮತ್ತು ವೈಶಿಷ್ಟö್ಯತೆ ತುಂಬಲಿರುವ ನೂತನ ಸೌಲಭ್ಯ ಇದಾಗಿದ್ದು, ಈ ಯೋಜನೆಗೆ ಕುಮಟಾ ಹೆಡ್
ಪೋಸ್ಟ್ ಆಫೀಸ್‌ನಲ್ಲಿ ನಡೆದ ಸಮಾರಂಭದಲ್ಲಿ ಅಂಚೆ ಅಧೀಕ್ಷಕ ಧನಂಜಯ್ ಆಚಾರ್ಯ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕುಮಟಾ ಸಬ್ ಡಿವಿಜನ್ ಪೋಸ್ಟ್ ಇನ್ಸ್ಪೆಕ್ಟರ್ ಗಿರೀಶ್ ಕುಮಾರ್ ಡಿ, ಕಾರವಾರ ವಿಭಾಗದ ಮಾರ್ಕೆಟಿಂಗ್
ಎಕ್ಸಿಕ್ಯೂಟಿವ್ ರಾಘವೇಂದ್ರ ಆಚಾರ್ಯ, ಹೆಡ್ ಪೋಸ್ಟ್ ಮಾಸ್ಟರ್ ಸಾವಿತ್ರಿ ಭಟ್ಟ, ಅಂಚೆ ಇಲಾಖೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು
ಉಪಸ್ಥಿತರಿದ್ದರು.
ಈ ನೂತನ ವ್ಯವಸ್ಥೆ ಕುಮಟಾ ತಾಲೂಕಿನ ಬಂಕಿಕೊಡಲ, ಚಂದಾವರ, ಗೋಕರ್ಣ, ಗುಡೇ ಅಂಗಡಿ, ಹೆಗಡೆ, ಹಿರೇಗುತ್ತಿ, ಮಾದನಗೇರಿ,
ಮಿರ್ಜಾನ್, ಕುಮಟಾ ಕೆನರಾ ಕಾಲೇಜು ರಸ್ತೆ ಕುಮಟಾ, ಕುಮಟಾ ಕಚೇರಿ, ಕಡತೋಕ ಹಾಗೂ ಹೊನ್ನಾವರ ತಾಲೂಕಿನ ಗೆರ್ ಸೊಪ್ಪ ಜ್ಯೋತಿನಗರ,
ಅಡಿನಬಾಳ, ಹಳದಿಪುರ, ಕರ್ಕಿ, ಕಾಸರಗೋಡು, ಮಂಕಿ, ಮೇಲಿನ ಇಡಗುಂಜಿ, ಪ್ರಭಾತ್ ನಗರ, ಮತ್ತು ಭಟ್ಕಳ ತಾಲೂಕಿನ ಭಟ್ಕಳ ಬಜಾರ, ಭಟ್ಕಳ, ಕಾಯ್ಕಿಣಿ,
ಮುರುಡೇಶ್ವರ, ಶಿರಾಲಿ ಬಜಾರ್, ಶಿರಾಲಿ ಅಂಚೆ ಕಚೇರಿ ಮತ್ತು ಇವುಗಳ ಅಡಿ ಬರುವ ಶಾಖಾ ಅಂಚೆ ಕಚೇರಿಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.