

ಬೆಂಗಳೂರು: ಮೈಸೂರು ರಸ್ತೆಯ ಕಲ್ಯಾಣಿ ಮೋಟಾರ್ಸ್ ಅರೇನಾ ಶೋರೂಂನಲ್ಲಿ ಬ್ಯಾಟರಾಯನಪುರದ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಲಿಂಗರಾಜು ಮಾರುತಿ ಸುಜುಕಿ ಕಂಪನಿಯ ಹೊಸ ವಿಟಾರಾ ಬ್ರಿಜಾ 1.5 ಕಾರು ಬಿಡುಗಡೆ ಮಾಡಿದರು. ಬಿಎಸ್-6 ಇಂಜಿನ್ ಹೊಂದಿರುವ 1.5 ಲೀಟರ್ ಕೆ-ಸೀರೀಸ್, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಪೆಟ್ರೋಲ್ ಕಾರು ಇದಾಗಿದೆ.
ಹೊಸ ಬ್ರಿಜಾ ಕಾರುಗಳು ಡ್ಯುಯಲ್ ಟೋನ್ ವರ್ಣಗಳಾದ ಸಿಜ್ಲಿಂಗ್ ರೆಡ್ ಮತ್ತು ಮಿಡ್ನೈಟ್ ಬ್ಲಾಕ್, ಟರ್ಕ್ಬ್ಲೂ ಮತ್ತು ಮಿಡ್ನೈಟ್ ಬ್ಲಾ್ಯಕ್, ಗ್ರಾ್ಯನಿಟಿ ಗ್ರೇ ಮತ್ತು ಆಟಮ್ ಆರೆಂಜ್ ಬಣ್ಣಗಳಲ್ಲಿ ಲಭ್ಯ ಇವೆ. ಬೆಂಗಳೂರು ಎಕ್ಸ್ಶೋರೂಂನ ಆರಂಭಿಕ ಬೆಲೆ 7.34 ಲಕ್ಷ ರೂ. ಆಗಿರುವುದಾಗಿ ಕಲ್ಯಾಣಿ ಮೋಟಾರ್ಸ್ನ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ನಟರಾಜ್ ತಿಳಿಸಿದರು.
ಉತ್ತಮ ಮುಖಭಾಗ ಹೊಂದಿರುವ ಹೊಸ ಬ್ರಿಜಾ ಕಾರುಗಳು ಬೋಲ್ಡ್ ಲುಕ್, ಡ್ಯುಯಲ್ ಚೇಂಬರ್, ಎಲ್ಇಡಿ ಪೊ›ಜೆಕ್ಟರ್ ಹೆಡ್ ಲ್ಯಾಂಪ್, ಎಲ್ಇಡಿ ಫಾಗ್ಲ್ಯಾಂಪ್, ಎಲ್ಇಡಿ ಟೇಲ್ ಲ್ಯಾಂಪ್, ಪ್ರಿಸೆಷನ್ ಕಟ್ ಅಲಾಯ್ ವ್ಹೀಲ್ಸ್, ಪುಶ್ ಸ್ಟಾರ್ಟ್ ಮತ್ತು ಸ್ಟಾಪ್ ಬಟನ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್, ಡ್ಯುಯಲ್ ಏರ್ಬ್ಯಾಗ್, ಎಬಿಎಸ್ ನೊಂದಿಗೆ ಇಬಿಡಿ, ಬ್ರೇಕ್ ಅಸಿಸ್ಟ್ ಸೇರಿ ಹಲವು ವೈಶಿಷ್ಟ್ಯಗಳನ್ನು ಕಾರು ಹೊಂದಿದೆ ಎಂದು ಮಾಹಿತಿ ನೀಡಿದರು. ಮೊದಲ ಗ್ರಾಹಕ ಮುನಿಯಪ್ಪ ಅವರಿಗೆ ಕಲ್ಯಾಣಿ ಮೋಟರ್ಸ್ ಅಧಿಕಾರಿಗಳು ಕಾರಿನ ಕೀ ಹಸ್ತಾಂತರಿಸಿದರು.
ಮಾರುತಿ ಸುಜುಕ್ ಹೊಸ ವಿಟಾರಾ ಬ್ರಿಜಾ ಕಾರನ್ನು ಬಿಡುಗಡೆ ಮಾಡುವ ಮುನ್ನವೇ ಅಂದಾಜು 1 ಸಾವಿರ ಕಾರಗಳ ಬುಕ್ಕಿಂಗ್ ಆಗಿದೆ. ಗ್ರಾಹಕರ ಪ್ರತಿಕ್ರಿಯೆ ಉತ್ತಮವಾಗಿದೆ. | ಎಸ್.ಎನ್. ಶೆಟ್ಟಿ ಕಲ್ಯಾಣಿ ಮೋಟರ್ಸ್ ಉಪಾಧ್ಯಕ್ಷ