ಸಾಹಿತ್ಯ ಲೋಕಕ್ಕೆ ಹೊಸ ಚೈತನ್ಯ

karkala karyagara
ಕವಿತೆಯ ಮಾತು ಅಡಿಗರ ನೆನಪು ಎಂಬ ವಿಚಾರದ ಬಗ್ಗೆ ಕಾರ್ಯಾಗಾರ ನಡೆಯಿತು.
Published on

ಕಾರ್ಕಳ: ಗೋಪಾಲ ಕೃಷ್ಣ ಅಡಿಗರು ನಾಡು ಕಂಡ ಶ್ರೇಷ್ಠ ಕವಿ, ಸಾರ್ವಕಾಲಿಕ ಮೌಲ್ಯಗಳನ್ನು ತಮ್ಮ ಬರವಣಿಗೆ ಮೂಲಕ ಜನರಿಗೆ ತಲುಪಿಸಿ ಸಮಾಜದ ಅಂಕು ಡೊಂಕು ತಿದ್ದಿದ ಅವರು ಸಾಹಿತ್ಯ ಲೋಕಕ್ಕೆ ಹೊಸ ಚೈತನ್ಯ ನೀಡಿದವರು ಎಂದು ಅತ್ತೂರು ಸೇಂಟ್ ಲಾರೆನ್ಸ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಉಪಾಧ್ಯ ಬಿ. ಹೇಳಿದರು.

ಯಕ್ಷ ರಂಗಾಯಣ ಕಾರ್ಕಳ ವತಿಯಿಂದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ಇತ್ತೀಚೆಗೆ ಕವಿತೆಯ ಮಾತು ಅಡಿಗರ ನೆನಪು ಎಂಬ ವಿಚಾರದ ಬಗ್ಗೆ ನಡೆದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಕಳ ಭುವನೇಂದ್ರ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ವನಿತಾ ಶೆಟ್ಟಿ, ಯಕ್ಷ ರಂಗಾಯಣ ಕಾರ್ಕಳ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net