

ಹಿರೇಕೆರೂರ: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ(ಬಿಇಒ) ಕಚೇರಿಗೆ ಹೊಸ ವಾಹನ ನೀಡಲಾಗಿದೆ.
ಇಲಾಖೆಯಲ್ಲಿ ತೀರಾ ಹಳೆಯದಾದ ಜೀಪು ಬಳಸುವ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ 2021ರ ನ.13ರಂದು ‘ತುಕ್ಕು ಹಿಡಿದ ಜೀಪಿನಲ್ಲೇ ಸಂಚಾರ’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು.
ನಂತರ ಹಳೆಯ ವಾಹನ ನಿಲ್ಲಿಸಿ ಸ್ಕ್ರಾೃಪ್ ಮಾಡಲಾಗಿತ್ತು. ಈ ಕುರಿತು ಬಿಇಒ ಎನ್. ಶ್ರೀಧರ್ ಅವರು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ಅಲ್ಲಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, 2023ರ ಮೇ 7ರಂದು ಇಲಾಖೆಗೆ ನೂತನ ವಾಹನ ನೀಡಲಾಗಿದೆ. ಇಲಾಖೆಗೆ ಹೊಸ ವಾಹನ ಬರಲು ಕಾರಣವಾದ ಪತ್ರಿಕೆ ಕಾರ್ಯಕ್ಕೆ ಬಿಇಒ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.