ಟಿವಿಎಸ್ ಅಪಾಚೆ ನೂತನ ಬೈಕ್ ಬಿಡುಗಡೆ

Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ಟಿವಿಎಸ್ ಶೋರೂಂನಲ್ಲಿ ಏರ್ಪಡಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ಅತ್ಯಾಧುನಿಕ "ಅಪಾಚೇ ಬ್ಲೇಜ್ ಆಫ್ ಬ್ಲ್ಯಾಕ್' ಬೈಕ್ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಅವರು ಬೈಕ್ ಅನಾವರಣಗೊಳಿಸಿದರು. ಗೋಕುಲ ಟಿವಿಎಸ್ ಸಂಸ್ಥೆಯು ಹೊಸ ಸೌಲಭ್ಯ, ಗ್ರಾಹಕ ಸ್ನೇಹಿ ವಾತಾವರಣ ಅಳವಡಿಸಿಕೊಂಡು ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ನ್ಯೂ ಅಪಾಚೇ 160 ಇದು ಮೋಟರ್ ಸೈಕಲ್ ಉದ್ಯಮದಲ್ಲಿ ಗೇಮ್ ಚೇಂಜರ್ ಎಂದೇ ಹೇಳಲಾಗುತ್ತಿದೆ. ಅತ್ಯಾಧುನಿಕ ತಾಂತ್ರಿಕತೆ ಒಳಗೊಂಡಿದ್ದು, 160 ಸಿಸಿ ರೇಸಿಂಗ್ ಸೆಗ್ಮೆಂಟ್ ನಲ್ಲಿ ಸ್ಟೈಲಿಷ್ ಡಿಸೈನ್ ನೋಡುಗರ ಗಮನ ಸೆಳೆಯುತ್ತಿದೆ.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗ್ರಾಹಕರು, ಸಾರ್ವಜನಿಕರು ನೂತನ ಬೈಕ್ ನೋಡಿ ಪ್ರಶಂಸೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net